Monday, July 26, 2010

ಪುಸ್ತಕ ಪರಿಚಯ - ೬ :

ಮೊದಲ ಹೆಜ್ಜೆ....

ತ್ರಿವೇಣಿಯವರ ೭ನೇ ಕಾದಂಬರಿ ಈ ಮೊದಲ ಹೆಜ್ಜೆ... ಇದರಲ್ಲಿ ಹುಟ್ಟುವ ಮೊದಲೇ ಬೇಡವಾಗಿತ್ತು ಎಂಬ ಭಾವನೆಯನ್ನು ಅಂಟಿಸಿಕೊಂಡೇ ಹುಟ್ಟುವ ಮಗು, ಹುಟ್ಟಿದ ತಕ್ಷಣ ತಾತನ್ನ ನುಂಗಿಕೊಂಡಿತೆಂಬ ಇನ್ನೊಂದು ಹಣೆಪಟ್ಟಿಯೊಂದಿಗೆ, ಬೇಡಾದ ಮಗುವಾಗಿಯೇ, ತಾತ್ಸಾರಕ್ಕೊಳಗಾಗೇ ಬೆಳೆಯುತ್ತೆ. ನೋಡಲು ಕಪ್ಪಗಿದ್ದ ಹುಡುಗಿಗೆ ಮದುವೆಯೇ ಆಗದೆ, ಬೆಳ್ಳಗೆ ಅಂದವಾಗಿದ್ದ ತಂಗಿ ಮಣಿಯ ಮದುವೆ ಆಗಿ ಅವಳ ಬಾಣಂತನಕ್ಕಾಗಿ, ಅಕ್ಕ ಬಂದಾಗ, ಅದೇ ಕಾಂಪೌಂಡಿನಲ್ಲಿದ್ದ ಹುಡುಗನ ಪರಿಚಯವಾಗಿ, ಅವನಿಂದ ಮೋಸಹೋಗಿ, ಮನೆ ಬಿಟ್ಟು ಎಲ್ಲೆಲ್ಲೋ ತಿರುಗಿ, ಕೊನೆಗೆ ತಾನೇ ಹೆತ್ತ ಮಗುವನ್ನು ಕೊಂದು ೫ ವರ್ಷದ ಜೈಲು ಶಿಕ್ಷೆ ಅನುಭವಿಸುತ್ತಾಳೆ. ನೋಡಲು ಬಂದ ತಂದೆ-ತಾಯಿಯರನ್ನು ಭೇಟಿ ಮಾಡುವುದೇ ಇಲ್ಲ. ಕೊನೆಗೆ ಅವಳು ಬಿಡುಗಡೆಗಾಗಿ ಕಾಯುತ್ತಾ ಕುಳಿತಿದ್ದ ದಿನ ಜೈಲಿಗೆ ಹೊಸ ಖೈದಿಯ ಪ್ರವೇಶವಾಗುತ್ತದೆ. ಎಲ್ಲೋ ಕೇಳಿದ ಕೊರಳು ಎಂದು ನೋಡಿದಾಗ, ತನಗೆ ಮೋಸ ಮಾಡಿದ್ದ "ಶಿವು" ೧೦ ವರ್ಷದ ಹುಡುಗಿಯ ಮೇಲಿನ ಅತ್ಯಾಚಾರದ ಅಪರಾಧದಲ್ಲಿ ೭ ವರ್ಷದ ಕಠಿಣ ಶಿಕ್ಷೆ ಅನುಭವಿಸಲು ಬಂದಿರುತ್ತಾನೆ. ಜೈಲಿನಿಂದ ಹೊರಬಂದ ನಮ್ಮ ನಾಯಕಿಯನ್ನು ಅವಳ ತಂದೆ ಕರೆದುಕೊಂಡು ಹೋಗುತ್ತಾರೆ.

ಒಲ್ಲದ ಮಗುವಾಗಿ, ಕೃಷ್ಣ ಸುಂದರಿಯಾಗಿದ್ದ ಹುಡುಗಿಯ ಒಳಗೂ ರಂಗು ರಂಗಿನ ಸುಂದರ ಕನಸುಗಳು ಇರುತ್ತವೆಂಬ ಚಿತ್ರಣ ಈ ಕಥೆ. ಸೆರೆಮನೆಯಲ್ಲಿ ಏನೇನು ನಡೆಯುತ್ತದೆಂಬುದೂ ಮತ್ತು ಯಾವ ಯಾವ ಮನಸ್ಥಿತಿಯ ಖೈದಿಗಳಿರುತ್ತಾರೆಂಬುದೂ ಸ್ಥೂಲವಾಗಿ ಚಿತ್ರಿಸಲ್ಪಟ್ಟಿದೆ.......

14 comments:

  1. ಈ ಕಾದಂಬರಿಯನ್ನು ನನ್ನ ಕಾಲೇಜಿನ ದಿನಗಳಲ್ಲಿ ಓದಿದ್ದೆ. ಆಗ ಅದೆಷ್ಟು ಅರ್ಥವಾಗಿತೋ ಗೊತ್ತಿಲ್ಲ. ನಿಮ್ಮ ಚಿಕ್ಕ-ಚೊಕ್ಕ ವಿಶ್ಲೇಷಣೇ ಓದಿ ಮತ್ತೊಮ್ಮೆ ಕಾದಂಬರಿಯನ್ನು ಓದುವ ಮನಸಾಗಿದೆ. ಧನ್ಯವಾದಗಳು ನಿಮಗೆ.

    ReplyDelete
  2. ಮೊದಲ ಹೆಜ್ಜೆ ನಾನು ಮೆಚ್ಚಿಕೊಂಡ ಕಾದಂಬರಿ. ಅದನ್ನು ಇಲ್ಲಿ ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು.

    ReplyDelete
  3. ಎಲ್ಲರಿಂದಲೂ ತಿರಸ್ಕಾರಕ್ಕೆ ಒಳಗಾಗಿದ್ದ ಹೆಣ್ಣುಮಗಳೊಬ್ಬಳ ಈ ಕಾದಂಬರಿ ಬಹಳ ಚೆನ್ನಾಗಿದೆ..
    ತ್ರಿವೇಣಿಯವರ ಅಭಿಮಾನಿ ನಾನು..

    ಮೊದಲ ಹೆಜ್ಜೆ ತುಂಬಾ ಚೆನ್ನಾಗಿದೆ..

    ಅವರ ಇನ್ನಷ್ಟು ಕಾದಂಬರಿಗಳ ಪರಿಚಯ ಮಾಡಿಕೊಡಿ..
    ತ್ರಿವೇಣಿಯವರ ಕಾದಂಬರಿಗಳ ಬಗೆಗೆ ಚರ್ಚೆ/ವಿಮರ್ಶೆ ನಡೇಯುವದು ನಾನೆಲ್ಲೂ ಓದಿಲ್ಲ..

    ಅವರ ನೆನಪುಮಾಡಿ..
    ಇನ್ನೊಮ್ಮೆ ಓದಬೇಕೆನಿಸುವ ಹಂಬಲ ಹುಟ್ಟಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು...

    ReplyDelete
  4. ಅಕ್ಕಾ,

    ನಾನೂ ಈ ಕಾದಂಬರಿಯನ್ನು ಬಹಳ ಹಿಂದೆ ಓದಿದ್ದೆ. ಎಲ್ಲವೂ ನೆನಪಿಲ್ಲದಿದ್ದರೂ ಮುಖ್ಯ ಕಥೆ ಚೆನ್ನಾಗಿ ನೆನಪಿದೆ. ತ್ರಿವೇಣಿಯವರ ಎಲ್ಲಾ ಕಾದಂಬರಿಗಳೂ ವಾಸ್ತವಿಕತೆಗೆ ಹತ್ತಿರವಾಗಿರುತ್ತವೆ. ಹಾಗಾಗಿಯೇ ಓದುಗರ ಮನದಿಂದ ಮಾಸುವುದಿಲ್ಲ. ಬರೆದರೆ ಅಂತಹ ವಾಸ್ತವ ಚಿತ್ರಣದಿಂದ ಕೂಡಿರುವ ಕಾದಂಬರಿಯನ್ನೇ ಬರೆಯಬೇಕು. ರಂಗು ರಂಗಿನ ಕಲ್ಪನೆಗಳಿಂದ ಕೂಡಿದ, ಸಿನೀಮಿಯ ಘಟನಾವಳಿಗಳಿಂದ ಹಣೆದ, ನಾಟಕೀಯ ಸಂಬಾಷಣೆಗಳಿರುವ ಕಾದಂಬರಿಗಳನ್ನು ಓದಲೂ ಆಗದು.. ಓದಿದರೂ ನೆನಪಾಗದು.

    ಮತ್ತೊಮ್ಮೆ ನೆನಪಿಸಿದ್ದಕ್ಕೆ ತುಂಬಾ ಧನ್ಯವಾದಗಳು.

    ReplyDelete
  5. ಸು೦ದರವಾದ ಪುಟ್ಟ ವಿಶ್ಲೇಷಣೆ....ಬರೆದ ಶೈಲಿ ಹಿಡಿಸಿತು..ಪುಸ್ತಕಗಳ ಪರಿಚಯ, ವಿಶ್ಲೇಷಣೆ ನಿಮ್ಮಿ೦ದ ಬರುತ್ತಿರಲಿ...ಧನ್ಯವಾದಗಳು.

    ReplyDelete
  6. Good Effort in introducing the book!

    ReplyDelete
  7. Thanks for the introduction

    naanu triveniyavara abhimaani

    ReplyDelete
  8. ನಾನು ಎಂಟನೆ ತರಗತಿಯಲ್ಲಿದ್ದಾಗ ಈ ಕಾದಂಬರಿ ಓದಿದ್ದೆ, ಆದರೆ ಈಗ ಮತ್ತೆ ಓದಬೇಕೆನಿಸುತ್ತಿದೆ.
    ಪುಸ್ತಕ ಪರಿಚಯದ ನಿಮ್ಮ ಪ್ರಯತ್ನ ಶ್ಲಾಘನೀಯ........

    ReplyDelete
  9. ಆತ್ಮೀಯ
    ಕಾದ೦ಬರಿಯ ಬಗ್ಗೆ ಕೇಳಿದ್ದೆ ನಿಮ್ಮ ನಿರೂಪಣೆ ಓದಿದ ಮೇಲೆ ಓದಲೇ ಬೇಕು ಎ೦ಬ ತುಡಿತ ಹೆಚ್ಚುತ್ತಿದೆ. ಸರಳ ಸು೦ದರ ವಿಶ್ಲೇಷಣೆ. ಕಾದ೦ಬರಿಯ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ. ಇ೦ದೇ ಅ೦ಕಿತಕ್ಕೆ ಲಗ್ಗೆ ಇಡುವೆ.
    ನಿಮ್ಮವ
    ಹರಿ

    ReplyDelete
  10. ಸುಂದರ ವಿಶ್ಲೆಶನೆ೧ ನಾನು ಈ ಕಾದಂಬರಿ ಓದಿದ್ದೆ! ಮತ್ತೆ ಎಲ್ಲವನ್ನೂ ಜ್ಞಾಪಕ ತರಿಸಿತು ತಮ್ಮ ಬರಹ!

    ReplyDelete
  11. Shamala,
    ಕಾದ೦ಬರಿಯ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ.

    ReplyDelete
  12. ಮೇಡಮ್,

    ಮೊದಲ ಹೆಜ್ಜೆ ನಾನು ಓದಿಲ್ಲ. ನಿಮ್ಮ ಲೇಖನವನ್ನು ಓದಿದ ಮೇಲೆ ನಾನು ನಮ್ಮ ಲೈಬ್ರರಿಯಲ್ಲಿ ಹೋಗಿ ತ್ರಿವೇಣಿಯವರ ಈ ಪುಸ್ತಕ ಹುಡುಕಿತಂದು ಓದಬೇಕು ಅನ್ನಿಸುತ್ತಿದೆ.
    ಧನ್ಯವಾದಗಳು.

    ReplyDelete
  13. ಕಾಕಾಶ್ರೀ, ವಿ ಆರ್ ಭಟ್ ಸಾರ್, ಗುರು ಸಾರ್, ಚಂದ್ರೂ, ಸೀತಾರಾಮ್ ಸಾರ್, ಮನಮುಕ್ತಾರವರೇ ಧನ್ಯವಾದಗಳು...


    ಸುಬ್ರಹ್ಮಣ್ಯ ಸಾರ್, ಮನದಾಳದವರೇ... ಶಿವು ಸಾರ್... ನಿಮಗೆಲ್ಲರಿಗೂ ಪುಸ್ತಕ ಮತ್ತೊಮ್ಮೆ ಓದಬೇಕೆಂಬ ಹಂಬಲ ಬಂದಿರುವುದು ನನಗೆ ತುಂಬಾ ಸಂತೋಷವಾಗಿದೆ. ಧನ್ಯವಾದಗಳು.

    ಪ್ರಕಾಶ್ ಸಾರ್...
    ನೀವೆಂದಂತೆ ನಾನೂ ತ್ರಿವೇಣಿಯವರ ಪುಸ್ತಕಗಳ ಚರ್ಚೆ, ವಿಮರ್ಶೆ ಎಲ್ಲೂ ನೋಡಿಲ್ಲ. ಈಗ ಪುಸ್ತಕಗಳು ಹೊಸ ಹೊಸದಾಗಿ ಅಚ್ಚಾಗಿ, ಎಲ್ಲ ಕಡೆಯೂ ಲಭ್ಯವಿದೆಯೆಂದು ಕೊಂಡಿದ್ದೇನೆ. ನಿಮಗೂ ಓದುವ ಆಸೆಯಾಗಿದೆ ಎಂದಿದ್ದೀರಿ. ನಾನು ಪುಸ್ತಕ ಪರಿಚಯಿಸಿದ್ದು ಸಾರ್ಥಕವಾಗಿದೆ. ಧನ್ಯವಾದಗಳು.

    ತೇಜಸ್ವಿನಿ
    ಹೌದು... ಸಿನೀಮಿಯವಾಗಿರುವ ಕಥೆಗಳನ್ನು ಓದಲು ಇಷ್ಟವಾಗೋಲ್ಲ. ತ್ರಿವೇಣಿಯವರು ಒಂದೊಂದು ಪುಸ್ತಕಗಳನ್ನೂ ವಿಷಯಗಳ ಅಧ್ಯಯನ ಮಾಡಿಯೇ ಬರೆಯುತ್ತಿದ್ದರೆಂದು ಓದಿದ್ದೇನೆ. ಅವರ ಯಾವ ಕಾದಂಬರಿಯೂ ಅತಿಯಾದ ಊಹೆ, ಕಲ್ಪನೆಗಳಿಂದ ಕೂಡಿಲ್ಲ. ಎಲ್ಲವೂ ವಾಸ್ತವಿಕ ಬದುಕಿಗೆ ಹತ್ತಿರವಾಗಿಯೇ ಇರುತ್ತವೆ. ಅದರಿಂದಲೇ ನಾನೂ ಎಲ್ಲವನ್ನೂ ಮತ್ತೆ ಹೊಸದೇನೋ ಎಂಬಷ್ಟು ಉತ್ಸಾಹದಿಂದ ಓದುತ್ತಿದ್ದೇನೆ. ಧನ್ಯವಾದಗಳು.

    ಹರೀ...
    ಅಂಕಿತದಲ್ಲಿ ಪುಸ್ತಕ ಸಿಕ್ಕಿತೇ...? ನಿಮ್ಮಂಥಹ ಯುವ ಜನಾಂಗದವರು, ತ್ರಿವೇಣಿ, ಎಂ ಕೆ ಇಂದಿರಾರ ಕಾದಂಬರಿಗಳನ್ನು ಖಂಡಿತಾ ಓದಬೇಕು. ಹಿಂದಿನ ತಲೆಮಾರಿನವರ ಚಿಂತನಾ ಸಾಮರ್ಥ್ಯ ಎಷ್ಟು ಉನ್ನತ ಮಟ್ಟದ್ದಾಗಿತ್ತೆಂದು ಇದರಿಂದ ತಿಳಿಯಬಹುದು. ತಕ್ಷಣವೇ ಕೊಂಡು ಓದುತ್ತೇನೆಂದ ನಿಮಗೆ ನನ್ನ ಧನ್ಯವಾದಗಳು. ಓದಿದ ನಂತರ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ. ಒಂದು ಒಳ್ಳೆಯ ಆರೋಗ್ಯಕರ ಚರ್ಚೆ ಮಾಡಬಹುದು...

    ReplyDelete
  14. ಈಚೆಗೆ ನಾನು ಮೊದಲ ಹೆಜ್ಜೆಯನ್ನ ಓದಿದೆ. ಸುಮಾರು ೧೯೬೦ರಲ್ಲಿ ಬರೆದಿದ್ದರೂ, ಕತೆ ಬಹುಶಃ ಇನ್ನೂ ಸ್ವಲ್ಪ ಹಿಂದಿನ ಕಾಲಕ್ಕೇ ಹೋಗುವಂತೆ ಅನ್ನಿಸುತ್ತೆ. ಹೆಣ್ಣು ಖೈದಿಗಳ ಬಗ್ಗೆ ಎಲ್ಲ ವಿಷಯ ಸಂಗ್ರಹ ಮಾಡಿ, ತ್ರಿವೇಣಿ ಅವರು ಬರೆದಿರುವುದು ನೋಡಿದರೆ ಆಶ್ಚರ್ಯವಾಗುತ್ತೆ.

    ReplyDelete