ಬೆಂಗಳೂರಿನಲ್ಲಿಯ ಹವಾಮಾನದಿಂದ ಫೀನಿಕ್ಸ್ ನಗರಕ್ಕೆ ಹೋಗಿ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳಲು ನಮಗೆ ತುಸು ಹೆಚ್ಚಾದ ಸಮಯವೇ ಹಿಡಿಯಿತು. ಫೀನಿಕ್ಸ್ ನಲ್ಲಿ ಜನರು ರಾತ್ರಿ ೮.೩೦/೯ ಕ್ಕೆಲ್ಲಾ ಮನೆಯ ದೀಪಗಳನ್ನು ಆರಿಸಿಬಿಡುತ್ತಾರೆ. ನಮ್ಮೂರಲ್ಲಿರುವ ಗಿಜಿಗಿಜಿ ಸಂಜೆಗಳು ಇಲ್ಲಿ ನೋಡಲು ಸಿಗುವುದಿಲ್ಲ. ಯಾವಾಗಲೂ ಬರಿಯ ವಾಹನಗಳ ಓಡಾಟವಷ್ಟೇ ಕಾಣುವುದು. ರಸ್ತೆಗಳಲ್ಲಿ ಪಾದಚಾರಿಗಳೂ ಇಲ್ಲ ಮತ್ತು ರಸ್ತೆಯ ದೀಪಗಳೂ ಕೂಡ ನಮ್ಮಲ್ಲಿಯಂತೆ ಪ್ರಜ್ವಲವಾಗಿಲ್ಲ.
ಮಂದವಾದ ಬೆಳಕಿನ ದೀಪಗಳಲ್ಲಿ,
ನಿಶ್ಯಬ್ದವಾದ ರಸ್ತೆಗಳನ್ನು ಕಿಟಕಿಗಳ ಮೂಲಕ ನೋಡಿದರೆ ಎಲ್ಲಿ ನೋಡಿದರೂ ಬರೀ
ಶಬ್ದರಹಿತವಾಗಿರುವುದು. ಎಲ್ಲವೂ ಅತೀ ಶುಭ್ರವಾಗಿರುವುದು. ಸ್ವಲ್ಪ ಮಟ್ಟಿಗೆ ಜನಗಳ ಗಿಜಿಬಿಜಿ ನೋಡಬೇಕೆಂದರೆ ’ಮಾಲ್’ ಗಳಿಗೆ ಹೋಗಬೇಕು. ಅಲ್ಲೂ ಕೂಡ ಅತಿಯಾದ ಗಲಾಟೆ, ಅಬ್ಬರದ ಮಾತುಗಳು, ಸಿನಿಮಾ ಹಾಡಿನ ಕಿರಿಚಾಟ ಯಾವುದೂ ಇಲ್ಲ. ಎಲ್ಲಾ ಮಾಲ್ ಗಳೂ ನಿಗದಿತ ಸಮಯಕ್ಕೆ ಸರಿಯಾಗಿ ವ್ಯಾಪಾರ ನಿಲ್ಲಿಸಿ, ಬಾಗಿಲು ಹಾಕುತ್ತಾರೆ. ಬೆಳಿಗ್ಗೆ ೬ ಘಂಟೆಗೆಲ್ಲಾ
ಕಸದ ಲಾರಿ ಬಂದು ಎಲ್ಲರ ಮನೆಯ ಹೊರಗಡೆ ಇಟ್ಟಿರುವ ದೊಡ್ಡ ದೊಡ್ಡ ಡಬ್ಬಿಗಳಿಂದ ಕಸವನ್ನು
ತೆಗೆದುಕೊಂಡು ಹೋಗುತ್ತದೆ. ಕಸವನ್ನು ವಿಂಗಡಿಸಿಡಬೇಕು. ವಾರದಲ್ಲಿ ಒಂದು ದಿನ
ಮರುಪಯೋಗಿ ಪರಿಸರ ಸ್ನೇಹಿ ಕಸ ತೆಗೆದುಕೊಂಡು ಹೋಗಲು ಹಸಿರು ಬಣ್ಣದ, ಹಸಿರು ಬಣ್ಣದ
ಚಿತ್ರಗಳೇ ತುಂಬಿರುವ ದೊಡ್ಡ ವಾಹನ ಬರುತ್ತದೆ. ವಾರದ ಮತ್ತೊಂದು ದಿನ ಮಾಮೂಲಿ ಕಸದ
ವಿಲೇವಾರಿ. ದೊಡ್ಡ ಪ್ಲಾಸ್ಟಿಕ್ ಕವರ್ ನಲ್ಲಿ ಕಸವನ್ನು ತುಂಬಿ, ಅದರ ಬಾಯಿಯನ್ನು
ಬಿಗಿಯಾಗಿ ಮುಚ್ಚಿ ಕಟ್ಟಿ, ಕಸದ ಡಬ್ಬಿಯಲ್ಲಿಟ್ಟು, ಮನೆಯ ಹೊರಗೆ ರಸ್ತೆಯಲ್ಲಿ
ಇಟ್ಟಿರಬೇಕು. ಹೀಗೆ ಹೊರಗಡೆ ಇಡುವ ದೊಡ್ಡ ಕಸದ ಡಬ್ಬಿಗೆ, ಉರುಳಿಸಿಕೊಂಡು ಹೋಗಲು
ಗಾಲಿಗಳಿರುತ್ತವೆ. ಎಲ್ಲವೂ ಅಚ್ಚುಕಟ್ಟಾಗಿ ಮತ್ತು ಸಮಯಕ್ಕೆ ಸರಿಯಾಗಿ ನಡೆಯುತ್ತದೆ.
ರಸ್ತೆ ಗುಡಿಸಲು ಒಂದು ದೊಡ್ಡ ವಾಹನ ಬರುತ್ತದೆ. ವಾಹನದ ಕೆಳಗೆ ಗುಂಡನೆಯ ಅಗಲವಾದ
ದೊಡ್ಡ ಬ್ರಶ್ ಗಳಿರುತ್ತವೆ. ಗುಂಡಿ ಅದುಮಿದ ಕೂಡಲೆ ಆ ಬ್ರಶ್ ಗಳು ವೇಗವಾಗಿ ರಸ್ತೆಯ
ಮೇಲೆ ಸುತ್ತುತ್ತಾ ಕಸವನ್ನು ಒಗ್ಗೂಡಿಸುತ್ತಾ ಗುಡಿಸುತ್ತವೆ. ಹೀಗೆ ಒಂದೊಂದು
ರಸ್ತೆಯನ್ನು ಸುಮಾರು ಅರ್ಧ ಘಂಟೆಯಲ್ಲಿ ಗುಡಿಸಿ, ವಾಹನ ಹೊರಟು ಹೋಗುತ್ತದೆ.
ಮನೆಗಳೂ ಕೂಡ ಮುಂದುಗಡೆಗೆ
ಹೆಂಚುಗಳನ್ನು ಹಾಕಿ ವಿನ್ಯಾಯ ಮಾಡಲಾಗಿರುತ್ತದೆ. ಬೀದಿಬಾಗಿಲ ಪಕ್ಕದಲ್ಲೇ ಮೋಟಾರು
ನಿಲ್ಲಿಸುವ ಲಾಯ (garage)ದ ಬಾಗಿಲಿರುತ್ತದೆ. ಕೆಲವರು ಬೀದಿ ಬಾಗಿಲುಗಳನ್ನು
ತಿಂಗಳಾನುಗಟ್ಟಲೆ ತೆಗೆಯುವುದೇ ಇಲ್ಲ.
ಈ ಜಾಗದಲ್ಲಿ ಸಾರ್ವಜನಿಕರ ಓಡಾಟಕ್ಕೆಂದು
ಬಸ್ಸುಗಳಾಗಲಿ, ಸುರಂಗ ರೈಲುಗಳಾಗಲೀ ಏನೂ ಇಲ್ಲ. ಅರಿಜೋನ ವಿಶ್ವವಿದ್ಯಾಲಯವಿರುವ ಕಡೆಗೆ
ರೈಲುಗಳ ಓಡಾಟವಿದೆ. ಕೆಲವು ಕಡೆ ನಾವು ಓಡಾಡುವಾಗ ಕೆಲವು ಬಸ್ಸುಗಳನ್ನು ನೋಡಿದೆವು ಅಷ್ಟೆ. ಬಾಕಿಯಂತೆ ಎಲ್ಲರೂ ತಮ್ಮ ತಮ್ಮ ಕಾರುಗಳಲ್ಲೇ ಎಲ್ಲ ಕಡೆಗೂ ಓಡಾಡಬೇಕು. ಕೆಲವೊಮ್ಮೆ ಕೆಲಸಕ್ಕೆ ಹೋಗುವಾಗ ಒಂದೇ ಕಡೆ ವಾಸವಿರುವ ಕೆಲವರು ಒಂದೊಂದು ದಿನ ಒಬ್ಬೊಬ್ಬರ ಕಾರಿನಲ್ಲಿ ಹೋಗಿ ಇಂಧನ ಉಳಿಸುತ್ತಾರೆ. ಮೋಟಾರು ಲಾಯದಲ್ಲಿಯೇ ಚಪ್ಪಲಿಗಳನ್ನು ಬಿಡುವ ವ್ಯವಸ್ಥೆಯನ್ನು ಮಾಡಿಕೊಂಡಿರುತ್ತಾರಾದ್ದರಿಂದ, ಯಾವಾಗ ಮನೆಯಿಂದ ಹೊರಗೆ ಹೋಗಬೇಕಾದರೂ ಮೋಟಾರು ಲಾಯದ ಬಾಗಿಲನ್ನೇ ಉಪಯೋಗಿಸುತ್ತಾರೆ. ನಮ್ಮ ಸಂಪ್ರದಾಯಕ್ಕೆ ವಿರುದ್ಧವಾಗ ಈ ಆಚರಣೆಗಳು ಮನಸ್ಸಿಗೆ ಸ್ವಲ್ಪ ಕಸಿವಿಸಿ ಮಾಡುವುದು.
ಬಾಡಿಗೆ ಮನೆಗಳಲ್ಲಿ ವಿದ್ಯುತ್ ಒಲೆಗಳು, ಪಾತ್ರೆ ತೊಳೆಯುವ ಯಂತ್ರ, ಬಟ್ಟೆ ಒಗೆಯುವ ಯಂತ್ರ, ನೀರು ಶುದ್ಧೀಕರಿಸುವ ಯಂತ್ರ (ಫೀನಿಕ್ಸ್ ನಲ್ಲಿ ಒರಟು ನೀರು ಸಿಕ್ಕುವುದರಿಂದ ಅದನ್ನು ಪರಿಷ್ಕರಿಸಿ ಉಪಯೋಗಿಸಬೇಕಾಗುವುದು) ಎಂದು ಎಲ್ಲವನ್ನೂ ಅಳವಡಿಸಿಯೇ ಬಾಡಿಗೆಗೆ ಕೊಡುತ್ತಾರೆ. ನನ್ನ ಮಗ ಬಾಡಿಗೆಗೆ ಇದ್ದ ಮನೆಯಲ್ಲಿ ನಾವು ಹೋದಾಗ ಪಾತ್ರೆ ತೊಳೆಯುವ ಯಂತ್ರ ಕೆಟ್ಟಿತ್ತು. ಅದನ್ನು ಬದಲಾಯಿಸಲು ಒಬ್ಬರನ್ನು ಮನೆಯ ಒಡತಿ ಕಳುಹಿಸಿದ್ದಳು. ಆ ಭಾರೀ ಗಾತ್ರದ, ಕುಳ್ಳಗಿನ ಮನುಷ್ಯ ಯಾರ ಸಹಾಯವೂ ಇಲ್ಲದೆ ಮಣ ತೂಕದ ಯಂತ್ರವನ್ನು ಒಂದು ಗಾಡಿಯಲ್ಲಿ ತಂದಿದ್ದನು. ಅದನ್ನು ಗಾಲಿಯಿರುವ ಪುಟ್ಟ ಕಬ್ಬಿಣದ ಸರಳುಗಳ ಸಹಾಯದಿಂದ ಮನೆಯ ಒಳಗಡೆ ತಂದನು. ತಾನೊಬ್ಬನೇ ಬಗ್ಗಿ, ಎದ್ದು, ಕುಳಿತು, ಮಲಗಿ, ಎಲ್ಲಾ ತರಹದ ಕಸರತ್ತನ್ನೂ ಮಾಡಿ, ಹಳೆಯ ಯಂತ್ರವನ್ನು ಹೊರಗೆ ತೆಗೆದು, ಹೊಸತನ್ನು ಅಳವಡಿಸಿ, ಅಲ್ಲಿ ಚೆಲ್ಲಿದ್ದ ನೀರನ್ನೆಲ್ಲಾ ಒರೆಸಿ, ನೆಲದ ಹಂಚಿನ ಮೇಲಾಗಿದ್ದ ಕಲೆಯನ್ನೆಲ್ಲಾ ಉಜ್ಜಿ, ಶುಚಿಗೊಳಿಸಿ (ಅದಕ್ಕೂ ಏನೋ ಒಂದು ಲೋಷನ್ ತಂದಿದ್ದ), ಓಕೆ ಬಾಯ್ ಎಂದು ಅರ್ಧಗಂಟೆಯಲ್ಲಿ ಹೊರಟೇ ಹೋದನು. ನಾವು ನೋಡುತ್ತಾ ಕುಳಿತವರು, ಅವನಿಗೆ ಏನಾದರೂ ಸಹಾಯ ಬೇಕೆ ಎಂದು ಕೇಳಿ ಪೆಚ್ಚಾದೆವು ಅಷ್ಟೆ.
ಮನೆಯ ಮುಂದುಗಡೆ ಬೆಳೆದ ಹುಲ್ಲನ್ನು ಕತ್ತರಿಸಲು ಕೂಡ ಜನಗಳು ಸಿಗುತ್ತಾರೆ. ಅವರ ಜಂಗಮ ದೂರವಾಣಿಗೆ ಕರೆ ಮಾಡಿದರೆ ಬಂದು ಎಲ್ಲವನ್ನೂ ಕತ್ತರಿಸಿ, ಗುಡಿಸಿ ಹೋಗುತ್ತಾರೆ. ನನ್ನ ಮಗ ಬಾಡಿಗೆಗೆ ಇದ್ದ ಮನೆಯ ಹುಲ್ಲು ಕತ್ತರಿಸಲು ಒಬ್ಬ ದಂಪತಿಗಳು ತಮ್ಮ ವಾಹನದಲ್ಲಿ ಬಂದಿದ್ದರು. ಗಂಡ ಹೆಂಡತಿ ಇಬ್ಬರೂ ಅದೆಷ್ಟು ಚಾಕಚಕ್ಯತೆಯಿಂದ ಒಬ್ಬೊಬ್ಬರು ಒಂದೊಂದು ಕಡೆಯಿಂದ ಪ್ರಾರಂಭಿಸಿ ಕೇವಲ ಅರ್ಧ ಗಂಟೆಯಲ್ಲಿ ಕೆಲಸ ಮಾಡಿ ಮುಗಿಸಿದರು. ಎಲ್ಲದಕ್ಕೂ ಬೇಕಾದಂತಹ ತರಹೇವಾರಿ ಉಪಕರಣಗಳು ಇರುತ್ತವೆ. ನಮ್ಮ ದೇಶದಂತೆ ಇಲ್ಲಿ ಎಲ್ಲ ಕೆಲಸವನ್ನೂ ಕೈಯಲ್ಲಿ ಮಾಡಿ ಶ್ರಮ ಪಡಬೇಕಾಗಿಲ್ಲ. ಉಪಕರಣಗಳ ಸಹಾಯದಿಂದ ಪ್ರತೀ ಕೆಲಸವನ್ನೂ ಅತಿ ಕಡಿಮೆ ಸಮಯದಲ್ಲಿ, ಅಚ್ಚುಕಟ್ಟಾಗಿ ಮಾಡಿಬಿಟ್ಟು, ಕಸವನ್ನೂ ತೆಗೆದು ಸ್ವಚ್ಛ ಮಾಡಿ, ತಮ್ಮ ಹಣ ಪಡೆದು "ಶುಭದಿನ" ಎಂದು ಹಾರೈಸಿ ಹೊರಟುಹೋಗುವರು.
ಮನೆಯ ಹಿತ್ತಲಲ್ಲಿ ಮಡಿಲ ತುಂಬಾ ಮಕ್ಕಳನ್ನೇ ಹೊತ್ತು ನಿಂತಿರುವ ಕಿತ್ತಳೆ ಹಣ್ಣಿನ ಗಿಡ, ನಮ್ಮ ಊರಿನ ನಿಂಬೆ ಹಣ್ಣಿಗಿಂತ ದೊಡ್ಡ ಗಾತ್ರದ ನಿಂಬೆ ಹಣ್ಣುಗಳನ್ನು ಹೊತ್ತು ನಿಂತಿರುವ ನಿಂಬೆಗಿಡ ನಮ್ಮ ಗಮನವನ್ನು ಸೆಳೆಯುತ್ತದೆ. ಆದರೆ ಯಾರೊಬ್ಬರೂ ಒಂದೇ ಒಂದು ಹಣ್ಣನ್ನೂ ಕೀಳುವುದೂ ಇಲ್ಲ, ಉಪಯೋಗಿಸುವುದೂ ಇಲ್ಲ. ಮಗನ ಮನೆಯ ಪಕ್ಕದ ಮನೆಯಲ್ಲಿ ನಿಂಬೆ ಗಿಡವಿರುವುದು. ಕೆಲವು ರೆಂಬೆಗಳು ಅವರ ಮನೆಯ ಗೋಡೆಯಿಂದಾಚೆ ಈ ಮನೆಯ ಕಡೆ ಬಗ್ಗಿ ಮೈತುಂಬಾ ಕಡು ಹಳದಿ ಬಣ್ಣದ ಹಣ್ಣುಗಳನ್ನು ಹೊತ್ತು, ಗಾಳಿಯಲ್ಲಿ ಈ ಕಡೆ ಆ ಕಡೆ ತೂಗುತ್ತಾ ಕೈಬೀಸಿ ಕರೆಯುವುದು. ಗಿಡ ಅವರ ಮನೆಯಲ್ಲಿ ಇದ್ದರೂ, ಗೋಡೆಯಿಂದೀಚೆಗೆ ಬಾಗಿರುವ ಕೊಂಬೆಗಳಿಂದ ನಾವು ಹಣ್ಣುಗಳನ್ನು ತೆಗೆದುಕೊಳ್ಳಬಹುದೆಂದು ತಿಳಿಯಿತು. ನಾನು ಕೆಲವು ಹಣ್ಣುಗಳನ್ನು ತಂದು ಉಪಯೋಗಿಸಿದೆ.
ದಪ್ಪನಾದ ಹೊರಕವಚವಿರುವುದರಿಂದ ರಸ
ತೆಗೆಯಲು ಸ್ವಲ್ಪ ಶ್ರಮ ಪಡಬೇಕಾದರೂ ಕೂಡ, ಹಣ್ಣಿನ ತುಂಬಾ ರಸ ಹೊತ್ತ ನಿಂಬೆ
ರುಚಿಯಾಗಿತ್ತು. ಮಾತು ಮಾತಿಗೂ ಕಾಯ್ದೆ ಕಾನೂನುಗಳನ್ನು ಅನುಸರಿಸಬೇಕಾದಂತಹ ಅತಿ
ಶಿಸ್ತು ಕೆಲವೊಮ್ಮೆ ನಮ್ಮನ್ನು ಪೇಚಿಗೆ ಸಿಲುಕಿಸುವುದು. ಎಲ್ಲವೂ ಮುಕ್ತವಾಗಿ, ಯಾರ
ಅಂಕೆಯೂ ಇಲ್ಲದೆ ಇರುವ ನಮ್ಮ ಊರು, ದೇಶ ಎಷ್ಟು ಹಿತ ಎನ್ನುವುದು ಹೊರಗೆ ಹೋದಾಗ ಮಾತ್ರವೇ
ತಿಳಿಯುವುದು. ಪ್ರಕೃತಿದತ್ತವಾದ ಸಕಲ ಸೌಲಭ್ಯಗಳಿಗೂ ನಾವೇ ಒಡೆಯರು, ಎಲ್ಲವೂ
ನಮಗಾಗಿಯೇ, ನಮ್ಮದೇ ಎನ್ನುವ ಭಾವದಲ್ಲಿ ಬದುಕುವ ನಾವು ಎಲ್ಲದಕ್ಕೂ ಅದರದೇ ಆದ ಒಂದು
ಬೆಲೆಯಿದೆಯೆಂಬ ಸತ್ಯ ನಮಗೆ ತಿಳಿಯುವುದು ನಾವು ನಮ್ಮ ದೇಶದಿಂದ ಹೊರಗಡೆ ಹೋದಾಗ ಮಾತ್ರ.
ಫೀನಿಕ್ಸ್ ನಗರವು ತುಂಬಾ ಆಸ್ತೆಯಿಂದ ನಕ್ಷೆ, ನಕಾಶೆಗಳ ಸಹಾಯದಿಂದ ಕಟ್ಟಲ್ಪಟ್ಟಿದೆ. ನೈಸರ್ಗಿಕ ಸೌಂದರ್ಯ ಹಾಳಾಗದಂತೆ ಕಾಪಾಡಲಾಗಿದೆ. ತುಂಬಾ ಹೆಚ್ಚೆನಿಸುವ ಬಹು ಮಹಡಿ ಕಟ್ಟಡಗಳು ಕಾಣಸಿಗುವುದಿಲ್ಲ. ಅರಿಜೋನ ವಿಶ್ವವಿದ್ಯಾಲಯದಲ್ಲಿಯೇ ನನ್ನ ಮಗ ತನ್ನ MS ಪದವಿ ಮಾಡಿದ್ದು. ಒಳಗೆಲ್ಲಾ ನಮ್ಮನ್ನು ಕಾರಿನಲ್ಲಿಯೇ ಕರೆದುಕೊಂಡು ಹೋಗಿ ತೋರಿಸಿದಾಗ ಅಲ್ಲಿ ಓದಲು ಬರುವ ವಿದ್ಯಾರ್ಥಿಗಳ ಸಂಕಷ್ಟಗಳು ನಮಗೆ ಅರ್ಥವಾಯಿತು. ವಿಸ್ತಾರವಾಗಿ ಹಬ್ಬಿರುವ ವಿಶ್ವವಿದ್ಯಾಲಯದಲ್ಲಿ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಪ್ರತಿ ವರ್ಷವೂ ಇರುತ್ತಾರಂತೆ. ವಿದ್ಯಾರ್ಥಿಗಳಿಗೆ ಬರಿಯ ತಂಗುವ ಮನೆಗಳು ಸಿಗುತ್ತವೆ. ಅಲ್ಲಿಯೇ ಸುಮಾರು ೪-೫ರ ಗುಂಪು ಅಥವಾ ಮನೆ ದೊಡ್ಡದಿದ್ದರೆ ಇನ್ನೂ ಕೆಲವು ಜನ ಸೇರಿಕೊಂಡು ಊಟದ ಖರ್ಚನ್ನು ಎಲ್ಲರೂ ಹಂಚಿಕೊಳ್ಳುತ್ತಾ ವಿದ್ಯಾಭ್ಯಾಸ ಮಾಡುತ್ತಾರೆ. ಹೀಗೆ ವಿದ್ಯಾರ್ಥಿಗಳಾಗಿರುವವರ ಅನುಕೂಲಕ್ಕಾಗಿ ಬಟ್ಟೆ ಒಗೆಯುವ ಯಂತ್ರಗಳನ್ನು ಅನೇಕ ಕಡೆ ಇರಿಸಲಾಗಿದೆ. ಇವು ವಿದ್ಯಾರ್ಥಿಗಳಿಗಾಗಿಯೇ ಮಾಡಿಕೊಟ್ಟಿರುವ ಅನುಕೂಲ. ಅಲ್ಲಿ ಬಟ್ಟೆ ಒಗೆಯುವ ಯಂತ್ರದಲ್ಲಿ ಬಟ್ಟೆಗಳನ್ನು ಹಾಕಿ ಅದಕ್ಕೆಷ್ಟು ದುಡ್ಡು ಕಟ್ಟಬೇಕೋ ಅದನ್ನು ಹಾಕಿದರೆ ಮಾತ್ರ ಯಂತ್ರ ಕೆಲಸ ಮಾಡುತ್ತದೆ. ಸುಮಾರು ಮುಕ್ಕಾಲು ಗಂಟೆ ಬಟ್ಟೆ ಒಗೆದ ನಂತರ ಅದನ್ನು ತೆಗೆದು ಒಣಗಿಸುವ ಯಂತ್ರದಲ್ಲಿ ಹಾಕಬೇಕು. ಕೆಲಸ ಆದ ನಂತರ ತೆಗೆದುಕೊಂಡು ಹೋಗಬೇಕು. ಇದು ವಾರದಲ್ಲಿ ಒಂದು ಸಲ ಮಾಡುವ ವಾರಾಂತ್ಯದ ಕಾರ್ಯಕ್ರಮ. ಕೈಯಲ್ಲಿ ಹೆಚ್ಚು ದುಡ್ಡಿಲ್ಲದೆ, ಬ್ಯಾಂಕುಗಳಲ್ಲಿ ಸಾಲ ತೆಗೆದುಕೊಂಡು ಓದಲು ಬರುವ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಆದ್ದರಿಂದ ಖರ್ಚು ಮಾಡುವ ಒಂದೊಂದು ಡಾಲರ್ ಕೂಡ ಯೋಚಿಸಿಯೇ ಮಾಡಬೇಕು. ಕೆಲವು ಅದೃಷ್ಟವಂತ ಹುಡುಗರಿಗೆ ಓದುವಾಗಲೇ ಸಂಜೆ ಸಮಯ ಕೆಲಸ ಮಾಡಲು ಸಿಕ್ಕುತ್ತದೆ. ಅಂತಹ ಸಮಯದಲ್ಲಿ ಹಣದ ಅಡಚಣೆ ಸ್ವಲ್ಪ ಕಡಿಮೆಯಾಗುವುದು. ಆದರೆ ಕೆಲವು ಮಕ್ಕಳಿಗೆ ಓದು ಮುಗಿದರೂ ಕೆಲಸ ಸಿಕ್ಕಿರುವುದಿಲ್ಲ. ನಮ್ಮ ದೇಶದಿಂದ ದೂರ ದೇಶಕ್ಕೆ ಓದಲು ಹೋದಾಗ ಒಬ್ಬರಿಗೊಬ್ಬರು ತುಂಬಾ ಸಹಾಯ ಮಾಡಿಕೊಳ್ಳುತ್ತಾರೆ. ಕೆಲಸ ಸಿಗುವವರೆಗೂ ಊಟ, ತಿಂಡಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ. ಹೊಸದಾಗಿ ಸೇರಿದ ವಿದ್ಯಾರ್ಥಿಗಳಿಗೆ ಅಲ್ಲಿ ಈಗಾಗಲೇ ಓದುತ್ತಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಕೂಡ ತುಂಬಾ ಸಹಾಯ ಮಾಡುತ್ತಾರೆ. ವಾರಾಂತ್ಯಗಳಲ್ಲಿ ಊಟಕ್ಕೆ ಕರೆಯುವುದು, ಹೊಸದಾಗಿ ಹೋದಾಗ ಬ್ಯಾಂಕ್ ಖಾತೆ ತೆರೆಯಲು ಸಹಾಯ ಮಾಡುವುದು, ವಿಶ್ವವಿದ್ಯಾಲಯದಲ್ಲಿ ಎಲ್ಲೆಲ್ಲಿ ಏನೇನಿದೆ ಎಂದು ಪರಿಚಯಿಸುವುದು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಗುಂಪಿನಲ್ಲಿರುವ ಇತರ ಭಾರತೀಯರನ್ನು ಪರಿಚಯಿಸುವುದನ್ನು ತುಂಬಾ ಕಾಳಜಿಯಿಂದ ಮಾಡುತ್ತಾರೆ. ವಿಶ್ವವಿದ್ಯಾಲಯದ ಸುತ್ತಮುತ್ತಲಲ್ಲೇ ಮನೆಗಳು ಬಾಡಿಗೆಗೆ ಸಿಗುತ್ತವೆಯಾದ್ದರಿಂದ ವಿದ್ಯಾರ್ಥಿಗಳು ಓದು ಮುಗಿಯುವವರೆಗೂ ಅಲ್ಲಿಯೇ ಇರುತ್ತಾರೆ. ಕೆಲಸ ಸಿಕ್ಕ ಕೂಡಲೆ ಸ್ವಲ್ಪ ಅನುಕೂಲಕರವಾದ ಮನೆ ನೋಡಿಕೊಂಡು ಹೊರಡುತ್ತಾರೆ.

ಅಲ್ಲಿಯ ರಿಪೇರಿ ಮಾಡುವ ವ್ಯಕ್ತಿಯು ನೆಲವನ್ನು ಸ್ವಚ್ಛ ಮಾಡಿಟ್ಟು ಹೋಗಿದ್ದು ಓದಿ, ಆಶ್ಚರ್ಯ, ಆನಂದ ಎರಡೂ ಆದವು. ನನಗೆ ನಮ್ಮೂರಿನಲ್ಲಿ (ಧಾರವಾಡ)ದಲ್ಲಿ ಆಗುತ್ತಿರುವ ಅನುಭವಗಳನ್ನು ಹೇಳಿದರೆ, ಬೇಜಾರು ಮಾತ್ರ ಆಗುವುದು!
ReplyDelete