ಶ್ರೀ ಮುತ್ತುಸ್ವಾಮಿ ದೀಕ್ಷಿತರು : (ಕ್ರಿ ಶ ೧೭೭೫ - ೧೮೩೫)
ಶ್ರೀ ದೀಕ್ಷಿತರು ೧೬ನೇ ವಯಸ್ಸಿಗೇ ವೇದಾಧ್ಯಯನ, ಕಾವ್ಯಾಲಂಕಾರ, ಜ್ಯೋತಿ:ಶಾಸ್ತ್ರ, ವೈದ್ಯ ಮತ್ತು ಮಂತ್ರ ಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆದಿದ್ದರು. ಅಲಂಕಾರ ಹಾಗೂ ಛಂದಸ್ಸ್ ಶಾಸ್ತ್ರಗಳಲ್ಲಿ ಪಾರಂಗತರು. ಶಬ್ದಾಲಂಕಾರ ಹಾಗೂ ತಾಳಾಲಂಕಾರಗಳನ್ನು ಸುಂದರವಾಗಿ ಕೃತಿಗಳಲ್ಲಿ ಅಳವಡಿಸಿದ್ದಾರೆ. ದ್ವಾದಶ ಮುದ್ರೆಗಳನ್ನು , ಕ್ಷೇತ್ರ ಮುದ್ರೆಗಳನ್ನೂ, ತಮ್ಮ ಕೃತಿಗಳಲ್ಲಿ ಅಳವಡಿಸಿದ್ದಾರೆ.
ಸುಮಾರು ೫೦ ಪಾಶ್ಚಾತ್ಯ ಕೃತಿಗಳಿಗೆ ಸಂಸ್ಕೃತ ಪದಪುಂಜ ಜೋಡಿಸಿ, ವೈಭವೀಕರಿಸಿದ್ದಾರೆ. ಶ್ರೀ ಭಾಸ್ಕರ ರಾಯರ ಲಲಿತಾ ಸಹಸ್ರನಾಮ ವ್ಯಾಖ್ಯಾನ ಮತ್ತು ಶ್ರೀ ವಿದ್ಯಾಪರ ತಂತ್ರ ಶಾಸ್ತ್ರ ಪ್ರಚುರ ಪಡಿಸಲು ಮತ್ತು ಬ್ರಹ್ಮಾಂಡ ಪುರಾಣ ಹಾಗೂ ಸೌಂದರ್ಯ ಲಹರಿಯ ವಿಶೇಷತೆಯನ್ನು ಪ್ರಚುರ ಪಡಿಸಲು, ಶ್ರೀ ಭಾಸ್ಕರ ರಾಯರೇ, ಮುತ್ತುಸ್ವಾಮಿ ದೀಕ್ಷಿತರ ಅವತಾರವೆತ್ತಿದ್ದಾರೆನ್ನುತ್ತಾರೆ, ಸಂಗೀತ ಪ್ರಪಂಚದಲ್ಲಿ.
ಇವರು ನಿಷ್ಣಾತ ವೀಣಾ ವೈಣಿಕರಾಗಿದ್ದರು. ಪಂಚದಶ ಗಮಕಗಳನ್ನು ಪ್ರಯೋಗ ಮಾಡಿ ತೋರಿಸಿದ್ದರು. ದೀಕ್ಷಿತರು ಷಣ್ಮುಖನ ಪರಮ ಭಕ್ತರಾಗಿದ್ದರು ಮತ್ತು ಸುಬ್ರಹ್ಮಣ್ಯ ಸ್ವಾಮಿಯು ಇವರಿಗೆ ಸಾಕ್ಷಾತ್ಕಾರವಾಗಿದ್ದನು.
ಶ್ರೀ ದೀಕ್ಷಿತರು ಕೃತಿಗಳ ಅನೇಕ ಗುಚ್ಛಗಳನ್ನು ರಚಿಸಿದ್ದಾರೆ -
೧) ಷೋಡಶ ಗಣಪತಿ ಕೃತಿಗುಚ್ಛ
೨) ತಿರುವಾರೂರಿನ ದೇವಾಲಯದ ಪಂಚ ಲಿಂಗಗಲ ಕುರಿತು ಕೃತಿಗಳು
೩) ಪಂಚತತ್ವಗಳ ಆಧಾರದ ಕೃತಿಗಳು
೪) ಅಭಯಾಂಬಾ ಕೃತಿಗಳು
೫) ಸುಬ್ರಹ್ಮಣ್ಯ ಸ್ವಾಮಿ ಕೃತಿಗಳು
೬) ತಿರುವಾರೂರಿನ ತ್ಯಾಗರಾಜ ಸ್ವಾಮಿ ಕುರಿತು ಕೃತಿಗಳು
೭) ನೀಲೋತ್ಪಲಾಂಬಾ ಕೃತಿಗಳು
೮) ಕಮಲಾಂಬಾ ನವಾವರಣ ಕೃತಿಗಳು
ಹೀಗೆ ಅವರ ರಚನೆಗಳಲ್ಲಿ ವೈವಿಧ್ಯಮಯ ಕೃತಿಗಳನ್ನು ನಾವು ಕಾಣಬಹುದು.
ಶ್ರೀ ತ್ಯಾಗರಾಜರು (ಕ್ರಿ ಶ ೧೭೬೭ - ೧೮೪೭)
ಶ್ರೀ ತ್ಯಾಗರಾಜರು ತಮ್ಮ ೧೮ನೇ ವಯಸ್ಸಿನಲ್ಲಿಯೇ ರಾಮಕೃಷ್ಣಾನಂದ ಯತೀಂದ್ರರಿಂದ ಶ್ರೀ ರಾಮ ಮಂತ್ರ ದೀಕ್ಷೆ ಪಡೆದು, ಇದನ್ನು ಒಂದು ವ್ರತದಂತೆ, ಒಂದು ಸಲಕ್ಕೆ ೧,೨೫,೦೦೦ ರಾಮನಾಮ ಜಪದಂತೆ ವರ್ಷಾನುಗಟ್ಟಲೆ ಮಾಡಿ, ತೊಂಬತ್ತಾರು ಕೋಟಿ ರಾಮಜಪ ಮಾಡಿದ್ದರು. ತಮ್ಮ ತಂದೆಯವರು ಮಾಡುತ್ತಿದ್ದ ರಾಮಾಯಣ ಪಾರಾಯಣವನ್ನು ಕೇಳಿ ಕೇಳಿ ಅವರು ಶ್ರೀ ರಾಮನ ಪರಮ ಭಕ್ತರಾಗಿದ್ದರು. ತಂದೆ ರಾಮ ಬ್ರಹ್ಮರು ಕಾಲವಾದ ನಂತರ ತಮ್ಮ ಪಾಲಿಗೆ ಬಂದ ತಂದೆಯ ಪೂಜೆಯ ಕೋಣೆ ಮತ್ತು ರಾಮಪಂಚಾಯತನ ವಿಗ್ರಹಗಳನ್ನು ಸಂತೋಷದಿಂದ ಸ್ವೀಕರಿಸಿದ್ದರು. ತ್ಯಾಗರಾಜರು ಗೃಹಸ್ಥರಾಗಿದ್ದೂ ವಿರಕ್ತಿಯಿಂದಿದ್ದರು. ರಾಮತಾರಕ ಮಂತ್ರದ ಸಿದ್ಧಿಯಾಗಿ ಅವರಿಗೆ ಶ್ರೀರಾಮನು ಲಕ್ಷ್ಮಣನೊಂದಿಗೆ ಸಾಕ್ಷಾತ್ಕರಿಸಿದ್ದನು. ಆನಂದ ತುಂಬಿ ತ್ಯಾಗರಾಜರು "ಏಲ ನೀ ದಯ ರಾದು" ಎಂಬ ಕೀರ್ತನೆ ರಚಿಸಿ ಹಾಡಿದ್ದರು. ತ್ಯಾಗರಾಜರು ಮಹಾರಾಜರು ಕೊಟ್ಟ ಸಂಪತ್ತನ್ನು ನಿರಾಕರಿಸಿದರೆಂಬ ಕಾರಣಕ್ಕೆ ಕೋಪಗೊಂಡು ಅವರ ಅಣ್ಣ, ರಾಮನ ಪೂಜೆಯ ಹುಚ್ಚು ತಮ್ಮನಿಗೆ ಹಿಡಿದಿರುವುದೇ ವಿರಕ್ತಿಗೆ ಕಾರಣವೆಂದು ಅವರು ಪೂಜಿಸುತ್ತಿದ್ದ ರಾಮಪಂಚಾಯತನ ವಿಗ್ರಹಗಳನ್ನು ಎತ್ತಿಕೊಂಡು ಹೋಗಿ ಕಾವೇರಿ ನದಿಯಲ್ಲಿ ಬಿಸಾಡಿಬಿಟ್ಟರು. ಕಾವೇರಿ ನದಿಯನ್ನೆಲ್ಲಾ ಶೋಧಿಸಿ, ಅದರಲ್ಲಿ ಈಜಾಡಿ ತಮ್ಮ ಸ್ವಾಮಿಯನ್ನು ಪಡೆದುಕೊಂಡಿದ್ದರು ತ್ಯಾಗರಾಜರು.
ಒಮ್ಮೆ ಅವರು ತಿರುಪತಿಗೆ ಹೋದಾಗ ದರ್ಶನದ ವೇಳೆ ಮುಗಿದಿದ್ದು ದೇವರ ಮುಮ್ದೆ ತೆರೆ ಹಾಕಲಾಗಿತ್ತು. ಇಷ್ಟು ದೂರ ಬಂದು ದೇವರನ್ನು ಕಾಣಲಗದಲ್ಲಾ ಎಂದು ಮರುಗಿ ತ್ಯಾಗರಾಜರು ಅಲ್ಲೇ ನಿಂತು "ತೆರೆ ತೆಗೆಯಬಾರದೇ, ತಿರುಪತಿ ವೆಂಕಟರಮಣ" (ತೆರ ತೀಯಗರಾದಾ) ಎಂದು ಹಾಡಿದರು. ಒಡನೆಯೇ ಅರ್ಚಕರೂ ಎಲ್ಲರೂ ನೋಡುತ್ತಿದ್ದಂತೆಯೇ ತೆರೆ ತನ್ನಷ್ಟಕ್ಕೆ ತಾನೇ ಪಕ್ಕಕ್ಕೆ ಸರಿದುಕೊಂಡು ಬಿಟ್ಟಿತು. ದೇವರ ದರ್ಶನ ಮಾಡಿದ ತ್ಯಾಗರಾಜರು ’ವೆಂಕಟೇಶಾ ನಿನ್ನನ್ನು ನೋಡಲು ಹತ್ತುಸಾವಿರ ಕಣ್ಣುಗಳು ಬೇಕು" ಎಂದು ಹಾಡಿ ಕೃತಜ್ಞತೆ ಸೂಚಿಸಿದ್ದರಂತೆ.
ಶ್ರೀ ತ್ಯಾಗರಾಜರೂ ಸಹ ಅತ್ಯಂತ ಪ್ರಸಿದ್ಧಿ ಪಡೆದಿರುವ ’ಪಂಚರತ್ನ ಕೃತಿಗಳು’ ಅಲ್ಲದೇ -
೧) ಕೋವೂರಿ ಪಂಚರತ್ನಗಳು
೨) ಶ್ರೀರಂಗಂ ಪಂಚರತ್ನಗಳು
೩) ತಿರುವಟ್ಟಿಯೂರ್ ಪಂಚರತ್ನಗಳು
೪) ಲಾಲ್ ಗುಡಿ ಪಂಚರತ್ನಗಳು
೫) ನಾರದ ಪಂಚರತ್ನಗಳು
೬) ಕಾಂಚಿಪುರಂ ಕೃತಿಗಳು
ಹೀಗೇ ಕೃತಿಗಳ ಗುಚ್ಛಗಳನ್ನೂ, ಅಸಂಖ್ಯಾತ ಕೀರ್ತನೆಗಳನ್ನೂ ರಚಿಸಿದ್ದಾರೆ.
ಶ್ರೀ ಬಾಲಮುರಳೀಕೃಷ್ಣ : (ಜನನ ೦೬.೦೭.೧೯೩೦)
ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಶ್ರೀ ಬಾರಮುರಳೀ ಕೃಷ್ಣರು ತಮ್ಮದೇ ಆದ ಹೊಸ ೭೨ ರಾಗಗಳನ್ನು ಕೊಡುಗೆಯಾಗಿಸಿದ್ದಾರೆ. ಇವರು ಅನೇಕ ಪ್ರಯೋಗಗಳನ್ನು ಮಾಡಿ, ಕ್ರಮವಾಗಿ ೪, ೩, ೨ ಸ್ವರಗಳನ್ನಷ್ಟೇ ಉಪಯೋಗಿಸಿ ಹೊಸ ರಾಗಗಳನ್ನು ಸ್ವತ: ಕಂಡುಹಿಡಿದು, ಕೃತಿಗಳನ್ನೂ ಕೂಡ ರಚಿಸಿದ್ದಾರೆ. ಇವರ ಈ ರಾಗಗಳ ಗುಚ್ಛದ ಒಂದು ರಾಗವಾದ "ಮಹತಿ"ಯನ್ನು ಆಧರಿಸಿ ತಮಿಳು ಸಿನೆಮಾ ಕ್ಷೇತ್ರದ ಪ್ರಸಿದ್ಧ ಹಾಡು "ಅತಿಶಯ ರಾಗಂ... ಆನಂದ ರಾಗಂ.... ", "ಅಪೂರ್ವ ರಾಗಂಗಳ್" ಚಿತ್ರದಲ್ಲಿ ಅಳವಡಿಸಲಾಗಿದೆ.
ಇವರು ಒಮ್ಮೆ ಪ್ಯಾರಿಸ್ ನಲ್ಲಿ ಸಂಗೀತ ಕಛೇರಿ ನಡೆಸುತ್ತಿದ್ದಾಗ, ಒಬ್ಬ ಫ್ರೆಂಚ್ ಪ್ರಜೆ - ಪಿಟೀಲು ತಯಾರಕ ಎದ್ದು ನಿಂತು ಇವರನ್ನು ಕೇಳಿದನಂತೆ... when one doctorate cannot be done in one's life time, how can Dr Balamurali perfect so many......... ಎಂದು.... ಇವರ ಪಾಂಡಿತ್ಯ ಪರೀಕ್ಷಿಸುವ ಸಲುವಾಗಿ, ಅವನು ಇವರನ್ನು ಒಂದು ಹಾಡು ಫ್ರೆಂಚ್ ಭಾಷೆಯಲ್ಲಿ ಹಾಡಲು ಕೇಳಿದಾಗ, ಇವರು ಸುಲಲಿತವಾಗಿ ಹಾಡಿದ್ದರು.... ಇವರಿಗೆ ಅನೇಕ ದೇಶ ವಿದೇಶ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಲಾಗಿದೆ. ಬಾಲಮುರಳಿಯವರ ಅಭಿಪ್ರಾಯದಲ್ಲಿ ನಮ್ಮ ಕರ್ನಾಟಕ ಶಾಸ್ತ್ರೀಯ ಸಂಗೀತದ ೭೨ ಮೇಳಕರ್ತ ರಾಗಗಳೇ ಪ್ರಪಂಚದ ಎಲ್ಲಾ ವಿಧದ ಸಂಗಿತಕ್ಕೂ ಆಧಾರ. ಇವರ ಸ್ವಂತ ರಚನೆ, ಅವರದೇ ರಾಗ "ಸರ್ವಶ್ರೀ"ಯಲ್ಲಿ... ಉಮಾಸುತಂ ನಮಾಮಿ, ಮಮ ಮಾನಸ್ಥಿತಂ.... ಈ ರಾಗಕ್ಕೆ ಇವರು ಕೇವಲ ಮೂರೇ ಮೂರು ಸ್ವರಗಳಾದ ’ಸ’ ’ಮ’ ’ಪ’ ಗಳನ್ನು ಮಾತ್ರವೇ ಉಪಯೋಗಿಸಿದ್ದಾರೆ...
ಶ್ರೀ ಬಾಲಮುರಳಿಯವರಿಗೆ ೧೮ನೇ ವಯಸ್ಸಿಗೇ ಮದುವೆಯಾಗಿ, ೨೦ನೇ ವಯಸ್ಸಿಗೇ ಅವರು ತಂದೆಯಾಗಿದ್ದರು. ೩ ಹೆಣ್ಣು ಮತ್ತು ೩ ಗಂಡು ಮಕ್ಕಳು. ಈಗವರಿಗೆ ಮರಿಮಕ್ಕಳೂ ಇದ್ದಾರೆ.....
ಆಧಾರ : ಶ್ರೀ ದೀಕ್ಷಿತರು ಮತ್ತು ಶ್ರೀ ತ್ಯಾಗರಾಜರು - ಲಭ್ಯವಿರುವ ಹಲವಾರು ಪುಸ್ತಕಗಳು
ಶ್ರೀ ಬಾಲಮುರಳೀಕೃಷ್ಣ - ಜಯಾ ಟಿ ವಿ ಯ "ತಿರುಂಬಿಪಾಕ್ಕಿರೇನ್" ಕಾರ್ಯಕ್ರಮದಲ್ಲಿ, ಸ್ವತ: ಬಾಲಮುರಳಿಯವರೇ
ಪ್ರಸ್ತುತ ಪಡಿಸಿದ ವಿವರಗಳು.
ಮಾಹಿತಿ ಚೆನ್ನಾಗಿದೆ. ಉಪಯುಕ್ತ
ReplyDeleteಧನ್ಯವಾದಗಳು ಪರಾಂಜಪೆ ಸಾರ್..
ReplyDeleteದೀಕ್ಷಿತರ ಮತ್ತು ಬಾಲಮುರಳಿಯವರ ಸಾಧ್ನೆಯ ಪರಿಚಯ ಚಿಕ್ಕಗಾಗಿ ಅರ್ಥಪೂರ್ಣವಾಗಿ ತಿಳಿಸಿದ್ದೀರಿ. ಧನ್ಯವಾದ
ReplyDeleteಸಂಗ್ರಹಣಾಯೋಗ್ಯ ಬರಹ
ReplyDeleteಬಹಳಷ್ಟು ವಿಚಾರಗಳು ತಿಳಿದೇ ಇರಲಿಲ್ಲ
ತಿಳಿಸಿದ್ದಕ್ಕೆ ಥ್ಯಾಂಕ್ಸ್
ಉಪಯುಕ್ತವಾದಂತಹ ಮಾಹಿತಿ ನೀಡಿದ್ದೀರಿ. ಹಾಗೆಯೇ ಅವರ ಕಾಲ (ಅವರು ಜೀವಿಸಿದ್ದ ಕಾಲದ ಬಗ್ಗೆ) ವಿಚಾರವೂ ತಿಳಿಸಿದ್ದರೆ, ಮತ್ತಷ್ಟು ಅನುಕೂಲವಾಗುತ್ತಿತ್ತು.
ReplyDeleteಶ್ರೀ ತ್ಯಾಗರಾಜರ ಬಗ್ಗೆ ಸ್ವಲ್ಪ ಓದಿದ್ದೆ. ಉಳಿದವರದ್ದು ತಿಳಿದಿರಲಿಲ್ಲ. ಧನ್ಯವಾದಗಳು...
ಸ್ನೇಹದಿಂದ,
ಸುಬ್ರಹ್ಮಣ್ಯ ಭಟ್ಟರಿಗೆ ಮತ್ತು ಡಾ ಗುರು ಅವರಿಗೆ ಧನ್ಯವಾದಗಳು...
ReplyDeleteಚಂದ್ರೂ....
ನೀವು ಹೇಳಿದಂತೆ ವಾಗ್ಗೇಯಕಾರರ ಜೀವನ ಕಾಲವನ್ನು ಹಾಕಿದ್ದೇನೆ. ಹಾಗೇ ವಿಷಯಗಳ ಆಧಾರ ಕೂಡ ಹಾಕಲು ಮರೆತುಬಿಟ್ಟಿದ್ದೆ... ಅದನ್ನೂ ಸೇರಿಸಿದ್ದೇನೆ. ಧನ್ಯವಾದಗಳು ಚಂದ್ರೂ... ಹೀಗೇ ಬರುತ್ತಿರಿ ಮತ್ತು ಉತ್ತಮ ಸಲಹೆಗಳನ್ನು ಕೊಡುತ್ತಿರಿ...
nice one sister :)
ReplyDeleteಶ್ಯಾಮಲ ಮೇಡಮ್,
ReplyDeleteವ್ಯಕ್ತಿ ವಿಚಾರದ ಬಗ್ಗೆ ನೀವು ತುಂಬಾ ಚೆನ್ನಾಗಿ ಬರೆಯುತ್ತಿದ್ದೀರಿ. ನಮಗೂ ಅನೇಕ ಮಾಹಿತಿಗಳು ದೊರೆತಂತೆ ಆಗುತ್ತಿವೆ...ಧನ್ಯವಾದಗಳು.
ತಮ್ಮಾ... ವಿನಯ್... ಧನ್ಯವಾದಗಳು...
ReplyDeleteಶಿವು ಸಾರ್..
ಧನ್ಯವಾದಗಳು ಲೇಖನ ಮೆಚ್ಚಿದ್ದಕ್ಕೆ....
ಶ್ಯಾಮಲಾ ಮೇಡಮ್ ಬಹು ಮಾಹಿತಿಪೂರ್ಣ, ಚಿಕ್ಕ ಮತ್ತು ಚೊಕ್ಕ ...ಅಲ್ಲದೇ ನಿಮ್ಮ - ಜರಾ ಹಟ್ ಕೆ - ಶೈಲಿಯ ಲೇಖನಗಳು ಮೆಚ್ಚುಗೆಯಾಗಿದ್ದು.
ReplyDeleteಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ
ReplyDeleteಡಾ. ಆಜಾದ್ ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು....
ReplyDeleteವಿ ಆರ್ ಭಟ್ ಸಾರ್...
ನನ್ನ ಮನೆಯ ಅಂಗಳಕೆ ಬಂದು ಆತ್ಮೀಯವಾಗಿ ಶುಭ ಕೋರಿದ ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು... ತಮಗೂ ಹೊಸ ವರ್ಷ ಸಂತಸ ತರಲೆಂದು ಹಾರೈಸುವೆ.....