Monday, October 4, 2010

ನಿಶ್ಯಬ್ದ.... ಶಾಂತತೆ...



ಅಲ್ಲಿತ್ತೊಂದು ನಿಶ್ಯಬ್ದ
ಶಾಂತತೆ....
ಚಿನ್ಮನವ
ಬೆಳಗಿಸುತ್ತಾ....
ಹೃದಯಾ೦ತರಾಳದಲ್ಲಿ...

ಅಲ್ಲಿತ್ತೊಂದು ನಿಶ್ಯಬ್ದ
ಶಾಂತತೆ....
ಹೊರಗೆ ಬ್ರಹ್ಮಾಂಡದಲ್ಲಿ
ಸಾಧನೆಯ ಹಾದಿಯಲ್ಲಿ
ಗುರಿ ತಲುಪುವಲ್ಲಿ....

ಅಲ್ಲಿತ್ತೊಂದು ನಿಶ್ಯಬ್ದ
ಶಾಂತತೆ.....
ಅನಂತ ಭಾವದಿ
ಅಮೂರ್ತ ಸ್ನೇಹದಿ
ಕತ್ತಲೆಯ ಮನಕೆ
ಜ್ಞಾನ ದೀಪವ
ಬೆಳಗಿಸುವಲ್ಲಿ..

ಅಲ್ಲಿತ್ತೊಂದು ನಿಶ್ಯಬ್ದ
ಶಾಂತತೆ.....
ನಿಸ್ವಾರ್ಥ ಮನದಿ
ನಿಷ್ಕಾಮ ಪ್ರೇಮದಿ
ಅಖಂಡ ವಾತ್ಸಲ್ಯವನು
ಧಾರೆಯಾಗಿಸುವಲ್ಲಿ..

ಅಲ್ಲಿತ್ತೊಂದು ನಿಶ್ಯಬ್ದ
ಶಾಂತತೆ.....
ಮುಂಜಾವಿನ ಶುಭ್ರ
ಬೆಳಕಿನಲ್ಲಿ....
ಅಂತರಾಳದಿಂದೇಳುತ್ತಾ
ಚಿನ್ಮುದ್ರೆಯಲ್ಲಿ....

ಚಿತ್ರಕೃಪೆ : ಅಂತರ್ಜಾಲ

13 comments:

  1. ಶ್ಯಾಮಲ ಮೇಡಮ್,

    ಮುಂಜಾವಿನ ಶುಭ್ರ
    ಬೆಳಕಿನಲ್ಲಿ....
    ಆ ಸ್ಥಿತಿಯನ್ನು ನಾನು ನಿತ್ಯ ಅನುಭವಿಸುತ್ತೇನೆ. ಅದು ಹೇಳಿಕೊಳ್ಳಲಾಗದಂತ ಅನುಭೂತಿ...ನಿಶ್ಯಬ್ದದ ಬಗ್ಗೆ ನಿಮ್ಮದು ಅದ್ಬುತ ಕಲ್ಪನೆ!

    ReplyDelete
  2. ಶ್ಯಾಮಲಾ ಅವರೆ, ಕವನ ಚೆನ್ನಾಗಿದೆ. ನಿಶ್ಶಬ್ದದಲ್ಲಿಯೇ ಅಡಗಿರುವ ನಾದವನ್ನು ತಿಳಿಯುವಂತಿದೆ. ಜೀವನಚೈತ್ರ ಚಿತ್ರದ ಗೀತೆಯನ್ನು ನೆನಪಿಸುತ್ತದೆ ಈ ಚಿತ್ರ.
    ಚಂದ್ರು

    ReplyDelete
  3. sooper akka :)
    sigarakke takka haage kavana kuda chennage ide :)

    ReplyDelete
  4. ನಿಶಬ್ದದಲ್ಲಿ ಮುಂಜಾವ ಬದುಕು ಅರುಳುವಲ್ಲಿಣ ಚಿತ್ರಣ ಕವನದಲ್ಲಿ ಸೊಗಸಾಗಿದೆ.

    ReplyDelete
  5. ನಿಶ್ಯಬ್ದ-ಶಾ೦ತತೆಯನ್ನು ಬದುಕಿನ ವಿವಿಧ ಆಯಾಮಗಳಲ್ಲಿ - ಅ೦ತರಾಳದಿ೦ದ ಅನ೦ತದವರೆಗೂ ವಿಸ್ತರಿಸುತ್ತ ಹೊಸ ಕಲ್ಪನೆಯನ್ನು ಸಾಕಾರಗೊಳಿಸಿದ್ದೀರಿ ಶ್ಯಾಮಲಾ.
    ಶುಭಾಶಯಗಳು
    ಅನ೦ತ್

    ReplyDelete
  6. ಶ್ಯಾಮಲಾ,
    ಕವನವನ್ನು ಓದುತ್ತ ನಿಶ್ಶಬ್ದಶಾಂತಿಯನ್ನು ಅನುಭವಿಸಿದೆ. ಮಂತ್ರಮುಗ್ಧನಾದೆ.

    ReplyDelete
  7. ನನ್ನದು "ಡಿಟೋ "...:). ಚೆನ್ನಾಗಿದೆ.

    ReplyDelete
  8. ಕವಿತೆ ಚೆನ್ನಾಗಿದೆ ಆದರೆ ಈ ನಿಶ್ಶಬ್ದ ಬೆಂಗಳೂರಿನಲ್ಲಿ ಸಿಗುವುದು ಅಪರೂಪ

    ReplyDelete
  9. ಶ್ಯಾಮಲ ಮೇಡಮ್, ಕವನ ಚೆನ್ನಾಗಿದೆ, ಆದ್ರೆ ನಿಶ್ಶಬ್ದ ಬೆಂಗಳೂರಿನಲ್ಲಿ ಕಷ್ಟವೇ ಸರಿ! ಧನ್ಯವಾಗಳು

    ReplyDelete
  10. ಶಿವು ಸಾರ್..
    ನೀವೇ ಅದೃಷ್ಟವಂತರು. ದಿನವೂ ಶುಭ್ರ, ನಿಶ್ಯಬ್ದ, ಶಾಂತ ಮುಂಜಾವನ್ನು ಅನುಭವಿಸುತ್ತೀರಿ. ಧನ್ಯವಾದಗಳು.

    ಚಂದ್ರೂ..
    ನಿಶ್ಯಬ್ದದಲ್ಲೂ ಅಡಗಿದ ನಾದ ಹುಡುಕಿ ಮೆಚ್ಚಿದ ನಿಮಗೆ ಧನ್ಯವಾದಗಳು

    ತಮ್ಮಾ ವಿನಯ್
    ಚಿತ್ರ ಹಾಗೂ ಕವನ ಎರಡೂ ಮೆಚ್ಚಿದ್ದಕ್ಕೆ ಧನ್ಯವಾದಗಳು

    ಸೀತಾರಾಮ್ ಸಾರ್
    ಮುಂಜಾವಿನ ನಿಶ್ಯಬ್ದದಲ್ಲಿ ಬದುಕು ಅರಳಿದೆ ಎಂದ ನಿಮಗೂ ಧನ್ಯವಾದಗಳು

    ReplyDelete
  11. ಅನಂತ್ ಸಾರ್...
    ನಿಶ್ಯಬ್ದ-ಶಾಂತತೆ ಬದುಕಿನ ಆಯಾಮಗಳಲ್ಲಿ ಅಂತರಾಳದಿಂದ ಅನಂತದವರೆಗೂ ಹರಡಿದೆ ನನ್ನ ಕಲ್ಪನೆ ಎಂದು ತುಂಬಾ ಚಂದಾಗಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

    ಸುನಾತ್ ಕಾಕಾ
    ಕವನ ಓದುತ್ತಾ ನಿಶ್ಯಬ್ದವಾಗಿ ಶಾಂತಿಯಿಂದ ಮಂತ್ರಮುಗ್ಧರಾಗಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು

    ಉಮೇಶ್ ಸಾರ್
    ಕವನ ಮೆಚ್ಚಿದ್ದೀರಿ. ಬೆಂಗಳೂರಿನಲ್ಲೂ ನಿಶ್ಯಬ್ದ ಖಂಡಿತಾ ಇದೆ ಸಾರ್. ಧನ್ಯವಾದಗಳು

    ಭಟ್ ಸಾರ್
    ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು. ಕಷ್ಟವಾದರೂ, ಹುಡುಕಿದರೆ, ಬೆಂಗಳೂರಿನಲ್ಲೂ ತನ್ನದೇ ಆದ ನಿಶ್ಯಬ್ದ ಖಂಡಿತಾ ಇದೆಯೆಂದು ನನ್ನ ಅಭಿಪ್ರಾಯ ಮತ್ತು ಅನುಭವ ಕೂಡ

    ಕವನ ಮೆಚ್ಚಿದ ಸುಬ್ರಹ್ಮಣ್ಯ ಅವರಿಗೂ ಧನ್ಯವಾದಗಳು...

    ReplyDelete
  12. 'ಅಲ್ಲಿತ್ತೊ೦ದು ಶಾ೦ತತೆ.....'ಕವನ ಚೆನ್ನಾಗಿದೆ. ಧನ್ಯವಾದಗಳು. ನನ್ನ ಬ್ಲಾಗ್ ಗೊಮ್ಮೆ ಬನ್ನಿ.

    ReplyDelete
  13. ಪ್ರಭಾಮಣಿಯವರಿಗೆ ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು....

    ReplyDelete