Thursday, November 25, 2010

ಮೋಡ ಮುಸುಕಿದ ಒದ್ದೆಯ ಭಾವ ..




ಅರುಣೋದಯದ ಶುಭ್ರ
ಕಿರಣಗಳಿಲ್ಲದೆ ನಭ
ಉಲ್ಲಾಸದ ಉತ್ಸಾಹದ
ಮಾತುಗಳಿಲ್ಲದೆ ಮನ
ಉದಾಸದ ಛಾಯೆಯ
ಮುಸುಕು ಹೊದ್ದಿತ್ತು...


ತನುವಿನ ’ನಡು’ ನೋವು

ಮನದ ನಡುವೆ ನೆಲೆಯಾಗಿ
ಬಿಸಿಲಿಲ್ಲದೇ.. ಒಣಗದೇ..

ಹಸಿಯಾಗಿ ಕಾಡುತಿರೆ..

ಕಟು ವಾಸನೆ ದಟ್ಟವಾಗಿ

ಗಾಳಿಯಲಿ ತೇಲಿತ್ತು...


ಹಗಲಲ್ಲೂ ಕತ್ತಲಾಗಿತ್ತು

ಮಾತುಗಳು ಮರೆತು

ಮನ ಮೂಕವಾಗಿತ್ತು

ಪಿಸು ಮಾತುಗಳ ಸಿಹಿ

ಕಲರವದ ಸದ್ದಿಲ್ಲದೆ

ಮೌನರಾಗದ ಛಾಯೆ

ಎಲ್ಲೆಡೆ ಹರಡಿತ್ತು...


ತೆರೆಮರೆಗೆ ಸರಿದ ರವಿ

ವಿರಹ ಚಿಂತೆಯಲಿ ಇಳೆ

ಒಡಲಾಗ್ನಿ ದಹಿಸಿ
ಸುಡುತಿರೆ...

ಕಣ್ಣೀರಿನಭಿಷೇಕದಲಿ
ಪ್ರೇಮ
ನಿವೇದನೆಯ ಹೊತ್ತು
ಭರದಿಂದ ಸಾಗಿದಳು

ಕ್ಷಿತಿಜದತ್ತ..

ತನ್ನನೇ

ಸಮರ್ಪಿಸಿಕೊಳ್ಳಲು..


ಚಿತ್ರಕೃಪೆ : ಅಂತರ್ಜಾಲ

11 comments:

  1. ರೂಪಕದಲ್ಲಿ ಕಟ್ಟಿದ ಕವನವು ಸಮರ್ಪಕವಾದ ನಿರ್ವಹಣೆಯಿಂದ ಸೊಗಸು ಪಡೆದಿದೆ.
    ಉತ್ತಮ ಕವನಕ್ಕಾಗಿ ಅಭಿನಂದನೆಗಳು.

    ReplyDelete
  2. ಮೇಡಮ್,

    ಕವನದಲ್ಲಿನ ಉಪಮೆಗಳು ತುಂಬಾ ಖುಷಿಕೊಡುತ್ತವೆ..

    ReplyDelete
  3. ಶ್ಯಾಮಲಾ ಅವರೆ, ಮೋಡ ಮುಸುಕಿದ.. ಉಪಮೆಗಳಿಂದ ಸುಂದರ ಕವನವಾಗಿದೆ. ಖುಷಿಕೊಡುತ್ತದೆ. ಚಿತ್ರವೂ ಅಷ್ಟೆ ಸೊಗಸಾಗಿದೆ.

    ReplyDelete
  4. ತನುವಿನ ’ನಡು’ ನೋವು
    ಮನದ ನಡುವೆ ನೆಲೆಯಾಗಿ
    ಬಿಸಿಲಿಲ್ಲದೇ.. ಒಣಗದೇ..
    ಹಸಿಯಾಗಿ ಕಾಡುತಿರೆ..
    ಕಟು ವಾಸನೆ ದಟ್ಟವಾಗಿ
    ಗಾಳಿಯಲಿ ತೇಲಿತ್ತು...

    ಹಗಲಲ್ಲೂ ಕತ್ತಲಾಗಿತ್ತು
    ಮಾತುಗಳು ಮರೆತು
    ಮನ ಮೂಕವಾಗಿತ್ತು
    ಪಿಸು ಮಾತುಗಳ ಸಿಹಿ
    ಕಲರವದ ಸದ್ದಿಲ್ಲದೆ
    ಮೌನರಾಗದ ಛಾಯೆ
    ಎಲ್ಲೆಡೆ ಹರಡಿತ್ತು...
    ಇಷ್ಟವಾದ ಸಾಲುಗಳು ಮೇಡಂ ಕವಿತೆ ತುಂಬಾ ಚೆನ್ನಾಗಿದೆ ನಿಮಗೆ ಧನ್ಯವಾದಗಳು.

    --
    ಪ್ರೀತಿಯಿಂದ ನಿಮ್ಮವ ಬಾಲು.

    ReplyDelete
  5. ಅಂತರಂಗದ ಮಾತುಗಳು...

    ನಿಜ ಮೋಡಗಟ್ಟಿದ...
    ವಾತಾವರಣ
    ಆಗಸಕ್ಕೂ... ಮನಕ್ಕೂ...
    ಬಲು ಬೇಸರ..

    ಅಭಿನಂದನೆಗಳು ಸೊಗಸಾದ ಕವನಕ್ಕೆ...

    ReplyDelete
  6. ನಾನು ಈ ಮೊದಲೇ ಪ್ರತಿಕ್ರಿಯಿಸಿದ್ದೆನೆಂತ ನೆನಪು, ಇರಲಿ, ಕವನಕ್ಕೆ ಕಾರಣ ಮುಸುಕಿದ ಮೋಡಗಳ ವಾತಾವರಣ, ಅದು ಬೇಸರಕ್ಕೆ ತರುತ್ತದೆ ಎಂದಲ್ಲವೇ? ಪ್ರಕೃತಿಯ ಸಹಜ ಕ್ರಿಯೆಯಾಗಿರುವುದರಿಂದ ನಡೆಯಲೇ ಬೇಕಾಗಿದೆ,ಹಿತವಾಗಿದೆ, ಧನ್ಯವಾದಗಳು

    ReplyDelete
  7. ಇದು ಪ್ರಕೃತಿಯ ಸಹಜ ಪ್ರತಿಕ್ರಿಯೆ ಎ೦ದು ಮೇಲ್ನೋಟಕ್ಕೆ ಅನಿಸಿದರೂ, ಇಲ್ಲಿ ಒ೦ದು ನಿವೇದನೆಯ ’ದನಿ’ ಇದೆ, ಸಮರ್ಪಣಾ ಭಾವವಿದೆ. ಉತ್ತಮ ನಿರೂಪಣೆ, ಶ್ಯಾಮಲಾ.

    ಶುಭಾಶಯಗಳು
    ಅನ೦ತ್

    ReplyDelete
  8. ಸುನಾತ್ ಕಾಕ..
    ಉತ್ತಮ ಕವನ ಎಂದು ಮೆಚ್ಚಿದ್ದೀರಿ. ನಿಮ್ಮ ಮೆಚ್ಚುಗೆ ನನಗೆ ಆಶೀರ್ವಾದ. ಧನ್ಯವಾದಗಳು ಕಾಕ.

    ಶಿವು ಸಾರ್..ಮತ್ತು ತಮ್ಮಾ ವಿನಯ್ ಮತ್ತು ಸೀತಾರಾಮ ಸಾರ್ ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು.

    ಚಂದ್ರೂ..
    ಕವನದ ಜೊತೆ ಚಿತ್ರವನ್ನೂ ಮೆಚ್ಚಿದ್ದೀರಿ. ಧನ್ಯವಾದಗಳು :-)

    ಪ್ರಕಾಶ್ ಸಾರ್
    ನಿಮ್ಮ ಅಭಿಮಾನ ತುಂಬಿದ ಅಭಿನಂದನೆಗಳಿಗೆ ಧನ್ಯವಾದಗಳು...

    ಬಾಲು ಸಾರ್...
    ನನ್ನ ಭಾವದ ಮಾತುಗಳು ನಿಮಗೂ ಇಷ್ಟವಾಗಿದ್ದು ತುಂಬಾ ಸಂತೋಷ. ಧನ್ಯವಾದಗಳು....

    ReplyDelete
  9. ಭಟ್ ಸಾರ್..
    ಮೊದಲು ಪ್ರತಿಕ್ರಿಯಿಸಿದ್ದೆ ಎಂದಿದ್ದೀರಿ.. ಇಲ್ಲ ಅಲ್ವಾ..? ಬೇಸರಕ್ಕೆ ಕಾರಣ ಮೋಡ ಮುಸುಕಿದ್ದಲ್ಲಾ.. ಮೋಡ ಮುಸುಕಿದ ದಿನವೇ ಮನಸ್ಸಿಗೆ ಉಲ್ಲಾಸ ತರುವಂತಹ ಒಂದು ಭಾವದ ಜೊತೆಯಿಲ್ಲದೇ ಮನ ಉದಾಸವಾಗಿದ್ದು... ಧನ್ಯವಾದಗಳು ಸಾರ್...

    ಅನಂತ್ ಸಾರ್..
    ಸರಿಯಾಗಿ ಹೇಳಿದ್ದೀರಿ. ನಿಜ ಇದರಲ್ಲಿ ಒಂದು ’ದನಿ’ ಇದೆ. ಸ್ಪಂದಿಸುವ ಭಾವವನ್ನು ನಿರೀಕ್ಷಿಸಿ, ಸಿಕ್ಕದಿದ್ದಾಗ ಉದಾಸವಾದ ಮನದ ಅಳಲು ಇದೆ. ಆಹ್ವಾನಿಸುವ ನಿವೇದನಾ ಭಾವವಿದೆ. ಸಿಕ್ಕಾಗ ಸಡಗರದಿಂದ ಸಮರ್ಪಿಸಿಕೊಳ್ಳುವ ಆತುರ ಇದೆ. ಕವನದ ಒಳಾರ್ಥವನ್ನು ಬಿಡಿಸಿ ಬಿಟ್ಟಿದ್ದೀರಿ... :-)... ಧನ್ಯವಾದಗಳು..

    ReplyDelete