ನಾವು ಒಂದು ವಾರಾಂತ್ಯದಲ್ಲಿ ಗ್ರ್ಯಾಂಡ್ ಕ್ಯಾನ್ಯನ್ ಎಂಬ ಅದ್ಭುತ ವಿಚಿತ್ರವನ್ನು
ನೋಡಲು ಹೋದೆವು. ಗ್ರ್ಯಾಂಡ್ ಕ್ಯಾನ್ಯನ್ ಗೆ ಹೋಗುವ ರಸ್ತೆ.....
ಫೆಬ್ರವರಿ - ಮಾರ್ಚ್ ತಿಂಗಳು ಅಮೆರಿಕದಲ್ಲಿ ಛಳಿಗಾಲ ಮುಗಿದು ಬೇಸಿಗೆ ಪ್ರಾರಂಭವಾಗುವ ಸಂಧಿ ಕಾಲದ ಸಮಯ. ಎತ್ತರದ ಪರ್ವತಗಳ ಶಿಖರಗಳಲ್ಲಿ ಮಾತ್ರ ಸ್ವಲ್ಪ ಸ್ವಲ್ಪ ಹಿಮ ಉಳಿದಿರುವುದು ನೋಡಲು ಸುಂದರ ದೃಶ್ಯ.
ಹಾದಿಯಲ್ಲಿ ಕಣ್ಮನ ತಣಿಸುವ ಮರಗಳ ಗುಂಪಿನ ದೃಶ್ಯ ನಮ್ಮ ದೇಶದ ಅನೇಕ ಸುಂದರ ತಾಣಗಳ ನೆನಪು ತರುವುದು.
ಮರಗಳ ಮಧ್ಯದಲ್ಲಿ ಕಾಣುವ ಹಾಲು ಬಿಳುಪು ಇನ್ನೂ ಪೂರ್ತಿಯಾಗಿ ಕರಗದೆ ಉಳಿದಿರುವ ಹಿಮದ ಹಾಸು.
ಅಮೆರಿಕದಲ್ಲಿ ಪ್ರವಾಸ ಹೋಗುವಾಗ ಹೊರಗೆ ಸಿಕ್ಕುವ ಆಹಾರದ ಜೊತೆ ಮನೆಯಿಂದಲೂ ಏನಾದರೂ ಮಾಡಿಕೊಂಡು ಹೋಗುವುದು ಹೆಚ್ಚು ಸೂಕ್ತವಾಗುತ್ತದೆ. ನಾವೂ ಬೆಳಿಗ್ಗೆ ತಿಂಡಿ, ಮಧ್ಯಾಹ್ನದ ಊಟಕ್ಕೆ ತಯಾರಿ ಮಾಡಿಕೊಂಡೇ ಹೊರಟಿದ್ದೆವು. ಉದ್ದುದ್ದ ರಸ್ತೆಗಳಲ್ಲಿ ಎಲ್ಲೂ ನಿಲ್ಲಿಸುವ ಅವಕಾಶವಿಲ್ಲ. ಆದರೆ ಹೀಗೆ ದೂರ ಪ್ರಯಾಣ ಮಾಡುವ ಪ್ರಯಾಣಿಕರಿಗಾಗಿ ಅಲ್ಲೊಂದು ಉಪಯುಕ್ತ ವ್ಯವಸ್ಥೆಯಿದೆ. ದಾರಿಯಲ್ಲಿ ಒಂದು ಚಿಕ್ಕ ತಿರುವ ತೆಗೆದುಕೊಂಡರೆ ನಮಗೆ ವಾಹನಕ್ಕೆ ಇಂಧನವೂ ಸಿಕ್ಕುತ್ತದೆ ಜೊತೆಗೆ ಅಲ್ಲಿ ನಮ್ಮ ವಾಹನವನ್ನು ನಿಲ್ಲಿಸಿಕೊಂಡು, ಒಳಗೇ ಕುಳಿತು ನಾವು ತಂದುಕೊಂಡ ಆಹಾರವನ್ನು ತಿನ್ನಬಹುದು. ಹೀಗೆ ಮಾಡುವುದರಿಂದ ದಾರಿಯಲ್ಲಿ ವೇಗವಾಗಿ ಚಲಿಸುವ ಇತರ ವಾಹನಗಳಿಗೆ ತೊಂದರೆಯಿಲ್ಲದೆ, ನಾವೂ ನೆಮ್ಮದಿಯಾಗಿ ವಿಶ್ರಮಿಸಲು ಅವಕಾಶವಾಗುವುದು. ರಸ್ತೆಗಳಲ್ಲಿ ಅಲ್ಲಲ್ಲಿ ದೊಡ್ಡದಾಗಿ ಚಿಹ್ನೆಗಳನ್ನೂ, ಫಲಕಗಳನ್ನೂ ಹಾಕಿ, ಮುಂದೆ ಇನ್ನೆಷ್ಟು ದೂರದಲ್ಲಿ ಈ ತರಹದ ವ್ಯವಸ್ಥೆಯಿದೆ ಎಂಬುದನ್ನು ಪ್ರದರ್ಶಿಸಿರುತ್ತಾರೆ.
ಕ್ಯಾನ್ಯನ್ ಹತ್ತಿರ ಬರುವಾಗ ನಮಗೆ ಅಲ್ಲಿ ಒಂದು ವಿಮಾನ ನಿಲ್ದಾಣವಿರುವುದು ಕಾಣುವುದು. ಪುಟ್ಟ ಪುಟ್ಟ ವಿಮಾನಗಳು ಕ್ಯಾನ್ಯನ್ ಮೇಲೆ ಹಾರಿಸಲಾಗುತ್ತದೆ. ಇದಲ್ಲದೆ ಹೆಲಿಕಾಪ್ಟರ್ ನಲ್ಲಿ ಸುತ್ತುವ ವ್ಯವಸ್ಥೆ ಕೂಡ ಇದೆಯಂತೆ.
ಕ್ಯಾನ್ಯನ್ ನೋಡಲು ಹೋಗುವ ಮೊದಲು ಒಂದು ಚಿತ್ರಮಂದಿರದಲ್ಲಿ ನಾವು ಕ್ಯಾನ್ಯನ್ ರಚನೆಯಾದ ಕಾಲ, ಅಲ್ಲಿದ್ದ ಬುಡಕಟ್ಟು ಜನಾಂಗದವರ ಜೀವನದ ವಿವರಣೆ ತಿಳಿಸುವ ಒಂದು ಚಿತ್ರವನ್ನೂ ನೋಡಿದೆವು.
ಕ್ಯಾನ್ಯನ್ ನೋಡಲು ಬಂದ ಪ್ರವಾಸಿಗರು ತಂಗಲು ಇಲ್ಲಿ ಹೋಟೆಲುಗಳೂ ಇವೆ.
ಅಂತಹ ಒಂದು ಹೋಟೆಲ್ ಆಕಾರ ನಮ್ಮ ಗಮನ ಸೆಳೆದಿತ್ತು. ಅದು ಗೋಪುರಾಕೃತಿಯ ಕಟ್ಟಡವಾಗಿತ್ತು.
ಸಾವಿರಾರು ವರ್ಷಗಳಲ್ಲಿ ಒಂದು ನದಿಯು ಎಷ್ಟೆಲ್ಲಾ ಕೌಶ್ಯಲ್ಯವನ್ನು ಸೃಷ್ಟಿಸಿದೆ ಎಂದು ಚಿಂತಿಸುವಾಗ, ಆಶ್ಚರ್ಯವಾಗುವುದು. ಸುಮಾರು ೪೫೬ ಅಡಿಗಳವರೆಗೆ ಆಳದಲ್ಲಿ ಕಮರಿಗಳನ್ನು ಕಾಣಬಹುದಾಗಿದೆ. ಎಲ್ಲಿ ನೋಡಿದರೂ, ಎತ್ತ ತಿರುಗಿದರೂ, ಕೆಂಪು ಮಿಶ್ರಿತ ಬಣ್ಣದಲ್ಲಿ ಕೊರೆದ ಶಿಲ್ಪ ಕಣ್ಮನ ತಣಿಸುವುದು. ಚಿತ್ರ ವಿಚಿತ್ರವಾದ ನಮೂನೆಗಳನ್ನು ನೋಡುತ್ತಾ ನೋಡುತ್ತಾ ಮನಸ್ಸು ಕಲ್ಪನಾ ಲೋಕದಲ್ಲಿ ವಿಹರಿಸಲಾರಂಭಿಸುವುದು. ನಮ್ಮ ಅಲ್ಪ ಆಯುಶ್ಯ ಹಾಗೂ ಬುದ್ಧಿಯಲ್ಲಿ ಏನೇನೆಲ್ಲವನ್ನೂ ಕಂಡಿರುವೆವೋ ಅದಕ್ಕೆಲ್ಲಾ ಈ ನಮೂನೆಗಳನ್ನು ಹೋಲಿಸುವ ಪ್ರಯತ್ನ ಮಾಡಲಾರಂಭಿಸುವೆವು. ಉಬ್ಬು ತಗ್ಗುಗಳು, ಎತ್ತರ ಇಳಿತಗಳು ನಿಜಕ್ಕೂ ಅತಿ ರಮ್ಯವಾದ ನೋಟವನ್ನು ಕಾಣುವೆವು. ಒಂದು ಕಡೆ ಒಟ್ಟಾಗಿ ಐದು ಕಲಶಗಳನ್ನು ಜೋಡಿಸಿರುವರೇನೋ ಎಂಬಂತೆ ಕಾಣುವುದು, ಇನ್ನೊಂದು ಕಡೆ ಯಾವುದೋ ದೇವತೆಯ ಹೋಲಿಕೆ ಕಾಣುವುದು. ಕೈಯಲ್ಲಿ ಶಂಖ ಚಕ್ರ ಗಧಾ ಪದ್ಮಗಳಿರುವ ಮಹಾವಿಷ್ಣುವೇನೋ ಎಂದು ಭ್ರಮಿಸುವಂತಾಗುವುದು.
ಉದ್ದಕ್ಕೂ ನಡೆಯುತ್ತಾ ನೋಡುತ್ತಾ ಹೋಗಲು ಮಾರ್ಗವನ್ನು ಮಾಡಿ, ಅಲ್ಲಲ್ಲೇ ವ್ಯೂ ಪಾಯಿಂಟುಗಳನ್ನು ಮಾಡಿರುವರು. ಅನಾವಶ್ಯಕ ಸಾಹಸ ಮಾಡಿ ಸಂಭ್ರಮಿಸುವ ಕೆಲ ಯುವಕ ಯುವತಿಯರು, ನಿಷಿದ್ಧವಾದ ಪ್ರದೇಶಗಳವರೆಗೂ ಹೋಗಿ ಅಲ್ಲಿ ವಿವಿಧ ರೀತಿಯಲ್ಲಿ ನಿಂತು, ಕುಳಿತು ಸೆಲ್ಫೀ ತೆಗೆದುಕೊಳ್ಳುವ ಹುಚ್ಚುತನ ನೋಡಿ ಸ್ವಲ್ಪ ಬೇಸರವಾಯಿತು. ಅದ್ಭುತ ಕಲೆಯನ್ನು ಕಾಣಲು ಬಂದಾಗಲೂ, ಅದನ್ನು ಪ್ರಶಂಸಿಸುವ ಬದಲು ಎಲ್ಲೆಂದರಲ್ಲಿ ಸೆಲ್ಫೀ ತೆಗೆದುಕೊಳ್ಳುವ ಹುಚ್ಚುತನ ಕಂಡು ನಗಬೇಕೋ ಅಳಬೇಕೋ ತಿಳಿಯದಾಯಿತು. ಎಷ್ಟೋ ಅಡಿಗಳ ಆಳದಲ್ಲಿ, ಸಣ್ಣಗೆ ತೊರೆಯಂತೆ ಹರಿಯುತ್ತಿರುವುದೇ ಪ್ರಖ್ಯಾತ ಕೊಲರೇಡೋ ನದಿಯೆಂದು ಮಗ ಬೆಟ್ಟು ಮಾಡಿ ತೋರಿಸಿದಾಗ, ಎಳೆ ಬಿಸಿಲಿನಲ್ಲಿ ಫಳಫಳಿಸುತ್ತಿದ್ದ ಗುಲಾಬಿ ಬಣ್ಣದ ಮಣ್ಣಿನ ಆಕೃತಿಗಳಲ್ಲಿ ನದಿ ಕಾಣಿಸಲೇ ಇಲ್ಲ. ಕೊನೆಗೂ ೪-೫ ಬಾರಿ ಬೆಟ್ಟು ಮಾಡಿ, ಬೇರೆ ಬೇರೆ ಜಾಗದಲ್ಲಿ ತೋರಿಸಿದಾಗ ಅಲ್ಲಿ ಸಣ್ಣ ತೊರೆಯೊಂದು ಇದೆಯೆಂಬುದು ತಿಳಿಯಿತು. ಗುಲಾಬಿ ಬಣ್ಣದ ವಿನ್ಯಾಸಗಳ ಮಧ್ಯದಲ್ಲಿ ಬಿಳಿಯ ಹಾಲಿನಂತೆ ಗೋಚರಿಸುವುದೇ ನದಿಯೆಂದು ಅರ್ಥವಾಗಲು ಸ್ವಲ್ಪ ಸಮಯವಾಯಿತು.

Wonderful!
ReplyDeleteDhanyavadagalu kaka...
Deleteಗ್ರ್ಯಾಂಡ್ ಕ್ಯಾನ್ಯನ್ ನಡುವೆ ಎಲ್ಲೋ ಶಿವ ದೇವಾಲಯವಿದೆಯಂತೆ! ಅದನ್ನೇನಾದರೂ ನೋಡಿದಿರಾ?
ReplyDeleteಹೌದಾ !!! ಹಾಗೆಂದು ಎಲ್ಲೂ, ಯಾರೂ ತಿಳಿಸಲಿಲ್ಲ...
Deleteಅದೇನೋ ನೈಸರ್ಗಿಕ ರಚನೆಯಂತೆ. ಸರಿಯಾದ ಮಾಹಿತಿ ದೊರೆಯುತ್ತಿಲ್ಲ.!
Deleteನಿಮಗೆ ಮಾಹಿತಿ ದೊರೆತರೆ ನನಗೂ ತಿಳಿಸಿ..
Delete