ಶ್ರೀ ಚಕ್ರ ಉಪಾಸನೆಯಲ್ಲಿ ದೇವಿಯನ್ನು ನಾನಾ ವಿಧವಾಗಿ ಅತ್ಯಂತ ಭಕ್ತಿಯಿಂದ ಆರಾಧಿಸ ಬೇಕಾಗುತ್ತದೆ. ಇದರಲ್ಲಿ ಒಂಭತ್ತು ಆವರಣಗಳನ್ನು ಪೂಜಿಸಬೇಕಾಗುತ್ತದೆ. ಪ್ರತಿಯೊಂದು ವೃತ್ತದಲ್ಲೂ ಪೂಜೆಯ ವಿಧಾನಕ್ಕೆ ಬೇರೆಯದೇ ಆದ ಹೆಸರೂ ಮತ್ತು ಶಕ್ತಿಯೂ ಇದೆ. ಇಲ್ಲಿರುವ ಒಂಭತ್ತು ಚಕ್ರಗಳನ್ನೂ ಪೂಜಿಸಿದ ನಂತರವೇ ದೇವಿಯ ಅನುಗ್ರಹ ನಮಗೆ ಲಭಿಸುವುದು. ಈ ನವ ಆವರಣಗಳಿಂದ ಕೂಡಿದ "ಶ್ರೀ ಚಕ್ರ"ದ ಉಪಾಸನೆಯೇ "ಶ್ರೀ ವಿದ್ಯೆ". ಆ ಲಲಿತಾಂಬಿಕೆ, ಜಗನ್ಮಾತೆ, ಪರಾಶಕ್ತಿ, ಬಿಂದು ಸ್ವರೂಪಳಾಗಿ ಶ್ರೀ ಚಕ್ರದಲ್ಲಿ ಕುಳಿತಿದ್ದಾಳೆ. ಈ ನವಾವರನ ಕೃತಿಗಳಲ್ಲಿ ದೀಕ್ಷಿತರು ದೇವಿಯ ಆರಾಧನೆಯನ್ನೂ, ದೇವಿಯ ಸೌಂದರ್ಯವನ್ನೂ ಅತ್ಯಂತ ಮನೋಹರವಾಗಿ ವರ್ಣಿಸಿದ್ದಾರೆ.....
ಆಶ್ವೀಜ ಬಹುಳ ಚತುರ್ದಶಿ - ನರಕ ಚತುರ್ದಶಿ ದೀಪಾವಳಿ ಪರ್ವ ದಿನವಾದ್ದರಿಂದ ದೀಕ್ಷಿತರು ಆ ಜಗನ್ಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ಸಾಯಂಕಾಲ ತಮ್ಮ ಎಲ್ಲಾ ಶಿಷ್ಯರನ್ನೂ ಕರೆದು ತಾವೇ ರಚಿಸಿದ ಪೂರ್ವಿ ಕಲ್ಯಾಣಿ ರಾಗದ "ಮೀನಾಕ್ಷಿ ಮುದಂ ದೇಹಿ" ಕೃತಿಯನ್ನು ವೀಣೆಯಲ್ಲಿ ನುಡಿಸುತ್ತಾ, ಎಲ್ಲರಿಗೂ ಹಾಡಲು ಹೇಳುತ್ತಾರೆ. "ಮೀನಲೋಚನಿ ಪಾಶಮೋಚನಿ....." ಎಂಬ ಅನುಪಲ್ಲವಿಯ ಸಾಹಿತ್ಯವನ್ನು ಪದೇ ಪದೇ ಹಾಡಿಸುತ್ತಾ... ವೀಣೆ ಬದಿಗಿಟ್ಟು ತಂಬೂರಿಯ ನಾದ ಕೇಳುತ್ತಾ...... ಆ ಜಗನ್ಮಾತೆಯ ಮಡಿಲಿನಲ್ಲಿ ಒರಗಿ ಬಿಡುತ್ತಾರೆ..... ತಾಯಿಯಲ್ಲಿ ಅವರ ಆತ್ಮ ಲೀನವಾಗಿ ಬಿಡುತ್ತದೆ........
ನಮ್ಮ ಸಂಗೀತ ಪ್ರಪಂಚದಲ್ಲಿ ದೀಪಾವಳಿಯನ್ನು "ದೀಕ್ಷಿತರ ದಿನ" ಎಂದೇ ಆಚರಿಸಲಾಗುತ್ತದೆ. ದೀಕ್ಷಿತರ್ಯ್ ಸಂಗೀತದ ಜ್ಯೋತಿಯನ್ನು ಬೆಳಗಿ, ನಮಗಾಗಿ ಇಂತಹ ಅಪೂರ್ವ ಹಾಗೂ ಅಮೂಲ್ಯ ಸಂಪತ್ತನ್ನು ಅನುಗ್ರಹಿಸಿದ್ದಾರೆ. ಮಹಾನ್ ಚೇತನವಾದ ದೀಕ್ಷಿತರನ್ನು, ನಾವು ಅವರ ರಚನೆಗಳನ್ನು ಹಾಡುತ್ತಾ, ಅವರು ಹಚ್ಚಿದ ನಾದ ಜ್ಯೋತಿಯನ್ನು ನಿರಂತರವಾಗಿ ಬೆಳಗುತ್ತಾ, ತಲೆಬಾಗಿ ನಮಿಸೋಣ............
ಮುಂದುವರೆಯುವುದು........
ಶ್ರೀ ಚಕ್ರದ ಪೂಜೆಯ ಮಹತ್ವದ ಬಗೆಗೆ ನಮ್ಮ ಚಿಕ್ಕಪ್ಪ ಬಹಳ ಹೇಳುತ್ತಿರುತ್ತಾರೆ...
ReplyDeleteಅದರ ಬಗೆಗೆ...
ಹಾಗೂ...
ಸಂಗೀತದ ಮಹಾನ್ ಚೇತನ
"ಮುತ್ತುಸ್ವಾಮಿ ದೀಕ್ಷಿತ್‍ರ ಬಗೆಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು...
ನಿಮಗೂ..
ನಿಮ್ಮ ಪರಿವಾರದವರಿಗೂ..
ನಿಮ್ಮ ಓದುಗ ಬಳಗಕ್ಕೂ....
ಬೆಳಕಿನ ಹಬ್ಬದ ಶುಭಾಶಯಗಳು...
ಶ್ರೀ ಚಕ್ರದ ಪೂಜೆಯ ಮಹತ್ವವನ್ನು ವಿವರಿಸುವುದು ನಿಜವಾಗಿಯೂ ಅತ್ಯಂತ ಕಠಿಣ ಕೆಲಸ ಪ್ರಕಾಶ್ ರವರೇ... ತರಾಸು ಅವರ ’ಚಕ್ರೇಶ್ವರಿ’ ಎಂಬ ಪುಸ್ತಕದಲ್ಲಿ ತುಂಬಾನೆ ವಿವರವಾಗಿ ಬರೆದಿದ್ದಾರೆ. ಅದರ ಬಗ್ಗೆ ಸಧ್ಯದಲ್ಲೇ ಬರೆಯುತ್ತೇನೆ. ಆಗ ಖಂಡಿತಾ ಓದಿ....
ReplyDeleteನಿಮಗೂ ನಿಮ್ಮ ಬಂಧು ಬಳಗದವರಿಗೂ ಈ ಬೆಳಕಿನ ಹಬ್ಬ ಸಂತೋಷ, ಉಲ್ಲಾಸ ತರಲಿ ಎಂದು ಹಾರೈಸುವೆ.....
ಧನ್ಯವಾದಗಳು
ಶ್ಯಾಮಲ
ಶ್ಯಾಮಲ ಅವರೆ,
ReplyDeleteಬಹಳ ದಿನಗಳ ನಂತರ ಸಂಗೀತ ವಿಷಯವಿರುವ ಬ್ಲಾಗ್ ಓದಲು ಸಿಕ್ಕಂತಾಯಿತು.
ಮುತ್ತುಸ್ವಾಮಿ ದೀಕ್ಷಿತರ ಬಗ್ಗೆ ಬಹಳಷ್ಟು ಜನರಿಗೆ ತಿಳಿಯದ ವಿಷಯ ತಿಳಿಸಿದ್ದೀರ. ವಂದನೆಗಳು.
ನೀವು ಉದಾಹರಣೆ ಕೊಡುವ ಹಾಡುಗಳು ಅಂತರ್ಜಾಲದಲ್ಲಿ / Youtubeನಲ್ಲಿ ಲಭ್ಯವಿದ್ದರೆ ದಯವಿಟ್ಟು ಹಾಕಿ.
ಶ್ಯಾಮಲ ಮೇಡಮ್,
ReplyDeleteಶ್ರೀಚಕ್ರ, ಅದರ ಪೂಜೆ, ವಿಧಿ, ವಿಧಾನಗಳ ಬಗ್ಗೆ ಚೆನ್ನಾಗಿ ಮಾಹಿತಿಯನ್ನು ನೀಡಿದ್ದೀರಿ. ದೀಪಾವಳಿಯ ದಿನವನ್ನು ದೀಕ್ಷಿತ್‍ರ ದಿನವೆಂದು ಆಚರಿಸುವುದರಲ್ಲಿ ಖಂಡಿತ ನ್ಯಾಯವೆನಿಸುತ್ತೆ..ಅಂಥ ಸಾಧಕರಿಗೆ ನನ್ನ ನಮನಗಳು.
ನಿಮಗೂ ಬೆಳಕಿನ ಹಬ್ಬದ ಶುಭಾಶಯಗಳು.
ಅಂತರ್ವಾಣಿಯವರೇ...
ReplyDeleteನನ್ನ ಬ್ಲಾಗ್ ಲೋಕಕ್ಕೆ ಸ್ವಾಗತ ಮತ್ತು ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು. ಹಾಡುಗಳ ಕೊಂಡಿ ಲಭ್ಯವಿದ್ದರೆ ಖಂಡಿತಾ ಹಾಕಲು ಪ್ರಯತ್ನಿಸುತ್ತೇನೆ...
ಶ್ಯಾಮಲ
ಶಿವು ಸಾರ್...
ReplyDeleteಬಿಡುವು ಮಾಡಿಕೊಂಡು ಬರಹ ಓದಿದ್ದಕ್ಕೆ ಧನ್ಯವಾದಗಳು. ಶ್ರೀ ಚಕ್ರ ಮತ್ತು ಆವರಣಗಳ ವಿಶೇಷತೆ ಮುಂದಿನ ಸರಣಿಯಲ್ಲಿ ಬರುವ ಒಂಭತ್ತು ಕೃತಿಗಳಲ್ಲಿ ಪ್ರಾಮುಖ್ಯತೆ ಪಡೆದಿದೆ. ದೇವಿಯ ಸೌಂದರ್ಯ ವರ್ಣನೆ ಅದ್ಭುತವಾಗಿದೆ. ಖಂಡಿತಾ ನೀವೆಲ್ಲಾ ಓದಿ ಪ್ರೋತ್ಸಾಹಿಸುವಿರೆಂದುಕೊಂಡಿದ್ದೇನೆ. ಧನ್ಯವಾದಗಳು.
ಶ್ಯಾಮಲ